ನವದೆಹಲಿ: ಡೈರಿ ಬ್ರಾಂಡ್ ‘ಅಮುಲ್’ ತನ್ನ ಸೃಜನಶೀಲ ಡೂಡಲ್‌ಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿಯ ಡೂಡಲ್ ಮಹಿಳಾ ಮೀಸಲಾತಿಯನ್ನು ಚಿತ್ರಿಸಿದೆ.
ಐತಿಹಾಸಿಕ ನಡೆಯಲ್ಲಿ, ರಾಜ್ಯಸಭೆಯು ಸೆಪ್ಟೆಂಬರ್ 21 ರಂದು ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುತ್ತದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೂಲ್ ತನ್ನ ಅಮೂಲ್ ಬಾಲಕಿಯೊಂದಿಗೆ ಮಹಿಳೆಯ ಚಿತ್ರವನ್ನು ಮೂಡಿಸಿ “ಮೀಸಲಾಗಿರಲು ಸದಾ ಅರ್ಹರು” ಎಂಬ ಒಕ್ಕಣೆಯನ್ನು ಬರೆದಿದೆ. ಅಮೂಲ್ ಅನ್ನು ಬಹುಸಂಖ್ಯೆಯ ಜನರು ಇಷ್ಟಪಡುತ್ತಾರೆ ಎಂದು ಬರೆದಿದೆ.
ಅಮೂಲ್ ಚಿತ್ರ ಲಿಂಗ ಸಮಾನತೆಯ ಮಹತ್ವವನ್ನು ಸೂಚಿಸುತ್ತದೆ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುತ್ತದೆ. ಸಮಕಾಲೀನ ಘಟನೆಗಳ ಹಾಸ್ಯದ ವ್ಯಾಖ್ಯಾನಕ್ಕೆ ಹೆಸರುವಾಸಿಯಾದ ಅಮೂಲ್ ಡೂಡಲ್, ಸೃಜನಶೀಲತೆ ಮತ್ತು ಹಾಸ್ಯದ ಮೂಲಕ ರಾಷ್ಟ್ರದ ಭಾವನೆಗಳನ್ನು ಸೆರೆಹಿಡಿಯುವ ಅಮುಲ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿತು.