ಶಿರಸಿ: ಇಲ್ಲಿನ ಎಂಇಎಸ್ ನರ್ಸಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ, ನರ್ಸಿಂಗ್ ಕೋರ್ಸ್ ಓದಿದರೆ ಭಾರತದಲ್ಲಷ್ಟೇ ಅಲ್ಲದೆ ಹೊರದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ನರ್ಸ್ ಗಳ ಸೇವೆ ಬೆಲೆ ಕಟ್ಟಲಾಗದು. ನೀವೆಲ್ಲಾ ಕಾಲೇಜಿಗೆ ಬರುವಾಗ ಕಚ್ಚಾ ವಸ್ತುಗಳಂತೆ ಇದ್ದೀರಿ. ಇಂದು ಪಕ್ಕಾ ವಸ್ತುವಿನಂತೆ ನೇರವಾಗಿ ಸೇವೆ ಸಲ್ಲಿಸಲು ಅನು ಆಗುವಂತೆ ನಿಮ್ಮನ್ನ ತರಬೇತುಗೊಳಿಸಲಾಗಿದೆ. ಇಂದಿನ ದಿನಗಳಲ್ಲಿ ಕೌಶಲ್ಯವಿಲ್ಲದೆ ಉದ್ಯೋಗ ಪ್ರಾಪ್ತಿಯಾಗದು. ಕೌಶಲ್ಯ ಅಭಿವೃದ್ಧಿಯು ಬಹಳ ಮುಖ್ಯ ಎಂದರು.
ಕಾಲೇಜಿನ ಪ್ರಾಚಾರ್ಯೆ ಬೇಬಿ ನಾಯಕ್ ಸ್ವಾಗತಿಸಿದರು. ಅಧ್ಯಾಪಕ ಎಂ.ಎ. ಬಬ್ಬಿ ವಂದಿಸಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.