• Slide
    Slide
    Slide
    previous arrow
    next arrow
  • ವಿಜ್ಞಾನ ವಿಚಾರಗೋಷ್ಠಿ: ಸಿವಿಎಸ್‌ಕೆಯ ಕೃತ್ತಿಕಾ ಭಟ್ಟ ರಾಜ್ಯ ಮಟ್ಟಕ್ಕೆ

    300x250 AD

    ಕುಮಟಾ: ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ ಹಾಗೂ ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ (ರಿ.) ಕಾರವಾರ ಇವರ ಸಹಕಾರದೊಂದಿಗೆ ನಡೆದ 2022-23ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜಿಲ್ಲಾ ಮಟ್ಟದ ವಿಜ್ಞಾನ ಕಾರ್ಯಕ್ರಮದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ಕುಮಾರಿ ಕೃತ್ತಿಕಾ ಭಟ್ಟ ಪ್ರಥಮ ಸ್ಥಾನ ಪಡೆದಿದ್ದಾಳೆ.

    ಶಾಲೆಯ ನುರಿತ ವಿಜ್ಞಾನ ಶಿಕ್ಷಕಿಯರಾದ ಅಮಿತಾ ಗೋವೆಕರ್ ಹಾಗೂ ಜ್ಯೋತಿ ಪಟಗಾರ ಮಾರ್ಗದರ್ಶನದಲ್ಲಿ ‘ಸಿರಿಧಾನ್ಯಗಳು ಅದ್ಭುತ ಆಹಾರ ಹಾಗೂ ರೂಢಿಗತ ಪಥ್ಯಾಹಾರ’ ಎಂಬ ವಿಷಯದಡಿ ಮಂಡಿಸಿದ ವಿಚಾರಕ್ಕೆ ಪ್ರಥಮ ಸ್ಥಾನ ದಕ್ಕುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

    300x250 AD

    ಇವಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿಯರು, ಶಿಕ್ಷಕರು, ಪಾಲಕರು ಹಾರೈಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top