• Slide
    Slide
    Slide
    previous arrow
    next arrow
  • ವಡ್ಡಿನಕೊಪ್ಪ ಕೊಲೆ ಪ್ರಕರಣ: ಮೂವರು ಪೋಲಿಸರ ಬಲೆಗೆ

    300x250 AD

    ಶಿರಸಿ: ಇತ್ತೀಚೆಗೆ ತಾಲೂಕಿನ ವಡ್ಡಿನಕೊಪ್ಪ ಬಳಿಯ ಅರಣ್ಯ ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾಗಿದ್ದರ ಬಗ್ಗೆ ವರದಿಯಾಗಿತ್ತು. ಘಟನೆಯನ್ನು ಕೊಲೆ ಎಂದು ಶಂಕಿಸಿ ತನಿಖೆ ನಡೆಸಿದ್ದ ಪೊಲೀಸರ ಬಲೆಗೆ ಮೂವರು ಕೊಲೆ ಹಂತಕರು ಸಿಲುಕಿದ್ದಾರೆ.

    ಹಾನಗಲ್ ತಾಲೂಕಿನ ಗೆಜ್ಜೆಹಳ್ಳಿಯ ಅಶೋಕ ಉಪ್ಪಾರ್ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಹಣದ ಆಸೆಗಾಗಿ ವ್ಯಕ್ತಿಯನ್ನು ಕೊಲೆಗೈದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹಾನಗಲ್ ತಾಲೂಕಿನ ಗೆಜ್ಜೆಹಳ್ಳಿಯ ಕಿರಣ್ ಸುರಳೇಶ್ವರ(23), ನಿರಂಜನ ಗೋವಿಂದಪ್ಪ ತಳವಾರ (19), ಹಾಗೂ ಗುಡ್ಡಪ್ಪ ಕೊಟ್ಟಪ್ಪ ತಿಳುವಳ್ಳಿ (19) ಬಂಧಿತ ಆರೋಪಿಗಳಾಗಿದ್ದು, ಘಟನೆಗೆ ಸಂಬಂಧಿಸಿದ ಕ್ರೆಟಾ ಕಾರ್, ಸ್ವಿಫ್ಟ್ ಕಾರ್, ಹಾಗೂ ಬೈಕ್ ಒಂದನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

    300x250 AD

    ಡಿ.ವೈ.ಎಸ್.ಪಿ. ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ್, ಬನವಾಸಿ ಠಾಣೆಯ ಪಿ.ಎಸ್.ಐ. ಚಂದ್ರಕಲಾ ಪತ್ತಾರ್, ಸುನಿಲಕುಮಾರ್ ಬಿ.ವೈ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top