ಗೋಕರ್ಣ: ಹನೇಹಳ್ಳಿ ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವಸಾಧಾರಣ ಸಭೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಪ್ರಭಾಕರ ಎನ್.ನಾಯ್ಕ ಮಾತನಾಡಿ ಸರ್ವ ಸದಸ್ಯರ ಸಹಕಾರದಿಂದ ಸಂಘ ಪ್ರಗತಿಯ ಪಥದತ್ತ ಸಾಗುತ್ತಿದ್ದು, ಈ ವರ್ಷ 16,63,341 ರು. ನಿವ್ವಳ ಲಾಭ ಗಳಿಸಿದ್ದು, ಶೇ. 10ರಷ್ಟು ಡಿವಿಡಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮುಂದಿನ ದಿನದಲ್ಲಿ ಗ್ರಾಹಕರಿಗೆ ಮತ್ತಷ್ಟು ಸೌಲಭ್ಯದೊಂದಿಗೆ ವಿವಿದೆಡೆ ಸಂಘದ ಶಾಖೆ ತೆರದು ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಸುನೀಲ ಹೆರವಟ್ಟಾ, ರಾಮಚಂದ್ರ ನಾಯ್ಕ, ಗಜಾನನ ಆರ್. ನಾಯಕ, ಪುಷ್ಪಾ ತಳೇಕರ, ಮಂಜುನಾಥ ಗುನಗಾ, ಉಳಿದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಅನಂತ ಅಡಿ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ಛಾಯಾ ಮಾಳಸ್ಕರ ವಂದಿಸಿದರು. ಪ್ರಧಾನ ವ್ಯವಸ್ಥಾಪಕ ಬಾಲಕೃಷ್ಣ ಪಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಹಿರಿಯ ಸದಸ್ಯರಾದ ಕಿಶೋರ ಗಾಂವಕರ, ನಿವೃತ್ತ ಉಪನ್ಯಾಸಕ ಮಹಾದೇವ ನಾಯ್ಕ, ಗೋವಿಂದ ನಾಯಕ, ಶಾಂತಾರಾಮ ನಾಯ್ಕ ಸೇರಿದಂತೆ 300 ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.