ಭಟ್ಕಳ: 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳಿಸುವ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಶೇ.50 ರಷ್ಟು ನೀರಿನ ಉಳಿತಾಯ, ಅಧಿಕ ಮತ್ತು ಗುಣಮಟ್ಟದ ಇಳುವರಿ ಪಡೆಯಬಹುದು, ಬೆಳೆಗೆ ನಿರ್ದಿಷ್ಟ ಪ್ರಮಾಣದಲ್ಲಿ ಏಕಕಾಲದಲ್ಲಿ ನೀರು ಪೂರೈಕೆಯಾಗುತ್ತದೆ, ಮಣ್ಣಿನ ಸವಕಳಿ ತಡೆಗಟ್ಟುವುದು, ಕಳೆ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡಿ, ಕೂಲಿ ಆಳುಗಳ ಉಳಿತಾಯ
ಪ.ಜಾತಿ ಹಾಗೂ ಪ.ಪಂಗಡ ರೈತರಿಗೆ 90% & ಇತರೆ ವರ್ಗದ ರೈತರಿಗೆ 75% ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಫಲಾನುಭವಿಗಳು ರೈತರಾಗಿದ್ದು, ಸ್ವಂತ ಹೆಸರಿನಲಿ ಜಮೀನು ಹೊಂದಿದ್ದು, ಆರ್.ಟಿ.ಸಿ. ಯಲ್ಲಿ ತೋಟಗಾರಿಕೆ ಬೆಳೆ ನಮೂದಾಗಿರತಕ್ಕದು. ನೀರಾವರಿ ಸೌಲಭ್ಯ ಹೊಂದಿರಬೇಕು. ಜಂಟಿ ಖಾತೆ ಇದ್ದಲ್ಲಿ ಇತರ ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆದಿರಬೇಕು. ರೈತರು ಸಲ್ಲಿಸಬೇಕಾದ ಝೇರಾಕ್ಸ ದಾಖಲೆಗಳು ಅರ್ಜಿದಾರರು ನಿಗದಿತ ನಮೂನೆಯಲ್ಲಿ ಅರ್ಜಿ, ಆಧಾರ ಕಾರ್ಡ, ಬ್ಯಾಂಕ ಪಾಸ್ಬುಕ್ಪ್ರತಿ, ಪ್ರಸ್ತುತ ವರ್ಷದ ಪಹಣಿ, ನೀರಿನ ಮೂಲದ ವಿವರ, ಮಣ್ಣು ಮತ್ತು ನೀರು ವಿಶೇಷಣೆ ಪ್ರಮಾಣ ಪತ್ರ, ಇತ್ಯಾದಿ (ಪ.ಜಾತಿ ಹಾಗೂ ಪ.ಪಂಗಡ ರೈತರು ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ).
ರೈತರು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ಪಡೆಯಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಭಟ್ಕಳ ಕಛೇರಿಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಅಥವಾ ಸಹಾಯಕ ತೋಟಗಾರಿಕೆ ಅಧಿಕಾರಿ ಮನೋಹರ ನಾಯ್ಕ (ಮೊ.ಸಂ.:tel:+919141656545) ಅವರನ್ನು ಸಂಪರ್ಕಿಸಬಹುದಾಗಿದೆ.