Slide
Slide
Slide
previous arrow
next arrow

ವಲಯ ಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ದೊಡ್ನಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಿರಿಯ ವಿಭಾಗದಲ್ಲಿ 4 ನೇ ವರ್ಗದ ಅವನಿ ಜೋಶಿ (ಕಂಠಪಾಠ ಕನ್ನಡ), 4 ನೇ ವರ್ಗದ ರಾಜಶ್ರೀ ಭಟ್ಟ (ಕಂಠಪಾಠ ಇಂಗ್ಲೀಷ), 3 ನೇ ವರ್ಗದ ಅದ್ವೈತ್ ವಿ. ಹೆಗಡೆ (ಧಾರ್ಮಿಕ ಪಠಣ ಸಂಸ್ಕೃತ), 3 ನೇ ವರ್ಗದ ಪರಿಣಿತಾ ಜಿ. ಭಟ್ ( ಲಘು ಸಂಗೀತ , ಭಕ್ತಿಗೀತೆ) , 4 ನೇ ವರ್ಗದ ಸಾನ್ವಿ (ಕಥೆ ಹೇಳುವುದು, ಅಭಿನಯ ಗೀತೆ), 4 ನೇ ವರ್ಗದ ಪ್ರೀತಮ್ ಹೆಗಡೆ (ಚಿತ್ರ ಕಲೆ – ಬಣ್ಣ ಹಚ್ಚುವಿಕೆ), 4 ನೇ ವರ್ಗದ ವಿನಂತಿ ನಾಯ್ಕ (ಕ್ಲೇ ಮಾಡೆಲಿಂಗ್), 3 ನೇ ವರ್ಗದ ಮಾಧವ ರಾಜೀವ ನಾರಾಯಣ (ಆಶು – ಭಾಷಣ ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟೂ 12 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ 10 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಿರಿಯ ವಿಭಾಗದಲ್ಲಿ 7 ನೇ ವರ್ಗದ ವರ್ಷಿಣಿ ಹೆಗಡೆ(ಧಾರ್ಮಿಕ ಪಠಣ ಸಂಸ್ಕೃತ), 6 ನೇ ವರ್ಗದ ಪ್ರತೀಕ ಭಟ್ಟ (ಲಘು ಸಂಗೀತ),5 ನೇ ವರ್ಗದ ಪ್ರಥಮ್ ರಾಯ್ಸದ(ಕಥೆ ಹೇಳುವುದು), 7 ನೇ ವರ್ಗದ ಪವಿತ್ರಾ ಡಿ. ಹೆಗಡೆ(ಚಿತ್ರ ಕಲೆ – ಬಣ್ಣ ಹಚ್ಚುವಿಕೆ), 5 ನೇ ವರ್ಗದ ಆರಾಧ್ಯ ಡಿ. ಹೆಗಡೆ (ಅಭಿನಯ ಗೀತೆ), 7 ನೇ ವರ್ಗದ ಸುಜಲಾ ಹೆಗಡೆ (ಆಶು – ಭಾಷಣ), 5 ನೇ ವರ್ಗದ ಖುಷಿ ಗೌಳಿ (ಮಿಮಿಕ್ರಿ), 7 ನೇ ವರ್ಗದ ಅನ್ವಿತಾ ಆರ್. ವಿ. (ಕವನ /ಪದ್ಯ ವಾಚನ ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

300x250 AD

5 ನೇ ವರ್ಗದ ಪೂಜಾ ಅರವಿಂದ ಭಟ್ಟ (ಕಂಠಪಾಠ ಕನ್ನಡ), 7 ನೇ ವರ್ಗದ ಪ್ರಿಯಾ ವಿ. ಭಟ್ಟ(ಕಂಠಪಾಠ ಇಂಗ್ಲೀಷ), 5 ನೇ ವರ್ಗದ ಚಿರಾಗ್ ಭಟ್ಟ (ಕಂಠಪಾಠ ಹಿಂದಿ) ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
7ನೇ ವರ್ಗದ ಅರ್ಜುನ ಸಕಲಾತಿ (ಕ್ಲೇ ಮಾಡ್ಲೆಂಗ್) 6 ನೇ ವರ್ಗದ ಸಿಂಧೂರಾ ಮಹೇಶ ಹೆಗಡೆ (ಭಕ್ತಿಗೀತೆ) ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟೂ 16 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ 8 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, 3 ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ, 2 ವಿಭಾಗಳಲ್ಲಿ ತೃತೀಯ ಸ್ಥಾನ ಪಡಡೆದಿದ್ದಾರೆ.
ವಿದ್ಯಾರ್ಥಿಗಳಿಗೆ,ಮಾರ್ಗದರ್ಶಿ ಶಿಕ್ಷಕರುಗಳಿಗೆ ಆಡಳಿತ ಮಂಡಳಿ,ಶಿಕ್ಷಕರು, ಪಾಲಕರು ಅಭಿನಂದಿಸಿ ತಾಲೂಕಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top