ಅಂಕೋಲಾ: ಆ.31ರಂದು ನಡೆಯಲಿರುವ ಶ್ರೀನಾರಾಯಣಗುರು ಜಯಂತಿ ನಿಮಿತ್ತ ಸೋಮವಾರ ಕಚೇರಿಯ ಸಭಾಭವನದಲ್ಲಿ ಸಮುದಾಯದ ಪ್ರಮುಖರ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ್ ಅಶೋಕ ಭಟ್ ಹಮ್ಮಿಕೊಂಡಿದ್ದರು.
ಶ್ರೀನಾರಾಯಣಗುರು ಜಯಂತಿ ಆಚರಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು. ಅಂತಿಮವಾಗಿ ತೀರ್ಮಾನ ಕೈಗೊಂಡು ಕಾರ್ಯಕ್ರಮದ ಯಶಸ್ವಿಗೆ ರೂಪುರೇಷೆಗಳನ್ನು ಸಿದ್ಧಪಡಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ಸತ್ಯಾಗ್ರಹ ಸ್ಮಾರಕ ಸಭಾಭವನದಿಂದ ಶ್ರೀ ನಾರಾಯಣಗುರು ಟ್ಯಾಬ್ಲೊಗೆ ತಹಸೀಲ್ದಾರ್ ಅಶೋಕ ಭಟ್ ಚಾಲನೆ ನೀಡಲಿದ್ದಾರೆ.
ಸತ್ಯಾಗ್ರಹ ಸ್ಮಾರಕ ಭವನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಂಚರಿಸಿ ನಂತರ ತಹಸೀಲ್ದಾರ ಕಚೇರಿ ಆವರಣದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಿಸಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ. ನಾಯ್ಕ, ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ, ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ಎಂ.ಪಿ.ನಾಯ್ಕ, ನಾಮಧಾರಿ ನೌಕರರ ಸಂಘದ ಮಹಾಬಲೇಶ್ವರ ನಾಯ್ಕ, ಪ್ರಮುಖರಾದ ರಾಜೇಂದ್ರ ನಾಯ್ಕ, ಮಾದೇವ ಎಂ. ನಾಯ್ಕ, ರಮೇಶ ಎಸ್.ನಾಯ್ಕ, ರಮೇಶ ಎನ್.ನಾಯ್ಕ, ಉಮೇಶ ಎನ್.ನಾಯ್ಕ, ನಾಗೇಂದ್ರ ನಾಯ್ಕ, ಶ್ರೀಪಾದ ಟಿ. ನಾಯ್ಕ, ಏಕನಾಥ ನಾಯ್ಕ, ಮಂಜುನಾಥ ಡಿ. ನಾಯ್ಕ, ಸುರೇಶ ನಾಯ್ಕ ಅಸ್ಲೆಗದ್ದೆ, ಶಿರಸ್ತೇದಾರ ಗಿರೀಶ ಜಾಂಬಾವಳಿಕರ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ ಸೇರಿದಂತೆ ಹಲವರು ಇದ್ದರು.