ಶಿರಸಿ: ನಗರದ ಪೂಗಭವನದಲ್ಲಿ ಅಂಚೆ ಇಲಾಖೆಯ ಶಿರಸಿ ವಿಭಾಗದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂಚೆ ಇಲಾಖೆಯ ಜಿಎಜಿ ಅಪಘಾತ ಪಾಲಿಸಿ ಪಡೆದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಚೆಕ್ ಅನ್ನು ಧಾರವಾಡ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್‌ಕುಮಾರ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಶಿರಸಿ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ ಜಿ ಅವರು ಮಾತನಾಡಿ ವರ್ಷಕ್ಕೆ ಕೇವಲ 399 ರೂಪಾಯಿಗಳನ್ನು ಪಾವತಿಸಿದ ಒಂದು ಪಾಲಿಸಿಯಿಂದಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ 10 ಲಕ್ಷ ರೂ. ಜೀವನಾಧಾರವಾಯಿತು. ಎಲ್ಲರೂ ಈ ಪಾಲಿಸಿಯ ಪ್ರಯೋಜನ ಪಡೆಯಲು ಮನವಿ ಮಾಡಿದರು.
ಕಳೆದ ವರ್ಷ ಭಾರತೀಯ ಅಂಚೆ ಇಲಾಖೆ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿತ್ತು. ಅದರಂತೆ ಶಿರಸಿ ಅಂಚೆ ವಿಭಾಗದಲ್ಲಿ ವಿಮೆಯನ್ನು ಮಾಡಿಸಿದ ಲಕ್ಷ್ಮಣ ಮಡಿವಾಳರ ಹಾಗೂ ಮಾಲತೇಶ್ ಮಾಳದಕರ್ ಅವರ ನೊಮಿನಿಗೆ ತಲಾ 10 ಲಕ್ಷ ರೂ.ಗಳ ಚೆಕ್ಕು ನೀಡುವುದರ ಮೂಲಕ ನೊಂದ ಕುಟುಂಬಕ್ಕೆ ದೊಡ್ಡ ಪ್ರಮಾಣದ ಸಹಾಯ ಅಂಚೆ ಇಲಾಖೆ ಮಾಡಿದಂತಾಗಿದೆ.
ಈ ಕಾರ್ಯಕ್ರಮದಲ್ಲಿ ಸಾತ್ವಿಕ್ ಸಿಮೆಂಟ್ ಪ್ರೊಡಕ್ಟ್ನ ಮಾಲೀಕರಾದ ಶ್ರೀಧರ ಮೊಗೇರ ತಮ್ಮ ಸ್ವಂತ ಹಣದಲ್ಲಿ ಎಲ್ಲ ಕೆಲಸಗಾರರಿಗೆ ಪೋಸ್ಟ್ನ ಇನ್ಸೂರೆನ್ಸ್ ಪಾಲಿಸಿ ಮಾಡಿಸಿದ್ದರು. ಮಾಲತೇಶ ಎಂಬ ಕಾರ್ಮಿಕ ಆಕಸ್ಮಿಕವಾಗಿ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ಶ್ರೀಧರ್ ಮೊಗೇರ ಅವರು ಮಾಡಿಸಿದಂತಹ ಇನ್ಸೂರೆನ್ಸ್ ಇಂದು ಅವರ ಕುಟುಂಬಕ್ಕೆ ನೆರವಾಗಿದೆ. ಇಂಥ ಮಾಲೀಕರು ಮುಂದಿನ ದಿನಗಳ ಎಲ್ಲಾ ಕಾರ್ಮಿಕರಿಗೆ ನೆರವಾಗಗಲಿ ಎಂಬುದು ಪೋಸ್ಟ್ ಇಲಾಖೆಯ ಆಶಯವಾಗಿದೆ. ಈ ಸಮಯದಲ್ಲಿ ಶ್ರೀಧರ ಮೊಗೇರ್ ಅವರನ್ನು ಸನ್ಮಾನಿಸಲಾಯಿತು.