ಶಿರಸಿ: ತಾಲೂಕಿನ ಹನುಮಂತಿಯ ಹಾಲಿನ ಡೈರಿಯಲ್ಲಿ ಆ.26ರಂದು ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್ಐ ನಾರಾಯಣ ಶಿರಾಲಿ ಭಾಗವಹಿಸಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಹಾಲಿನ ಡೈರಿಯ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಸಿದರು.ವೈಯಕ್ತಿಕ ಮಾಹಿತಿ, ಒಟಿಪಿಗಳನ್ನು ಯಾರಿಗೂ ಹಂಚಿಕೊಳ್ಳದಂತೆ, ಜನ್ಮ ದಿನಾಂಕ, ವಾಹನ ನಂಬರ್’ಗಳನ್ನು ಪಾಸ್ವರ್ಡ್’ಗಳನ್ನಾಗಿ ಬಳಸದಂತೆ ಎಚ್ಚರಿಕೆ ನೀಡಿದರು.
ಇದೇ ವೇಳೆ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮುಂಜಾಗೃತಾ ಕ್ರಮಗಳ ಕುರಿತು ತಿಳಿ ಹೇಳಿ, ತುರ್ತು ಸಹಾಯವಾಣಿ ಸಂಖ್ಯೆಗಳನ್ನು (1930, 112, 1098, 1962, 100) ತಿಳಿಸಿದರು.
ಎಎಸ್ಐ ರಮೇಶ ಮುಚುಂಡಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಎಫ್’ನ ಕೃಷ್ಣ ಹಾಗೂ ಬಸವರಾಜ್ ಸಲೋನಿ ಉಪಸ್ಥಿತರಿದ್ದರು.