Slide
Slide
Slide
previous arrow
next arrow

ಸಂಗೀತಾಭಿಮಾನಿಗಳಿಗೆ ರಸದೂಟ ಬಡಿಸಿದ ಸೌಂಡ್ ಆಫ್ ಮೆಲೋಡಿಸ್

300x250 AD

ಶಿರಸಿ: ನಗರದ ಸುಪ್ರಿಯಾ ಇಂಟರ್‌ನ್ಯಾಷನಲ್ ಹೊಟೇಲ್ ಸಭಾಭವನದಲ್ಲಿ ಶಿರಸಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಶೋಸಿಯೇಶನ್ ಸಂಘಟಿಸಿದ್ದ ಸೌಂಡ್ ಆಫ್ ಮೆಲೋಡಿಸ್ ಕಾರ್ಯಕ್ರಮ ಸಂಗೀತಾಭಿಮಾನಿಗಳಿಗೆ ಸಂಗೀತ ರಸದೂಟ ಬಡಿಸುವಲ್ಲಿ ಯಶಸ್ವಿಯಾಗಿದೆ.

ರಾಜದೀಪ ಟ್ರಸ್ಟ್ ಹಾಗೂ ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ, ವಿದೇಶ ಗಾಯನ ಖ್ಯಾತಿಯ ಉಸ್ತಾದ್ ಫಯಾಜ್‌ಖಾನ್ ಗಾನಸುಧೆ ಇಲ್ಲಿ ಹರಿದಿದ್ದು ಶಾಸ್ತ್ರೀಯ ಸಂಗೀತದೊಂದಿಗೆ ಠುಮರಿ, ಭಾವಗೀತೆ, ಭಕ್ತಿಗೀತೆ, ಗಝಲ್‌ಗಲು ಹಾಡಲ್ಪಟ್ಟು ವೈವಿಧ್ಯವಾಗಿ ಮೂಡಿಬಂತು. ಉಸ್ತಾದ್ ಖಾನ್ ಆರಂಭದಲ್ಲಿ ರಾಗ್ ಪೂರಿಯಾ ಕಲ್ಯಾಣವನ್ನು ವಿಸ್ತಾರವಾಗಿ ಹಾಡಿ ನಂತರ ಅಪರೂಪದ ಠುಮರಿ ಸಾದರಪಡಿಸಿದರು. ಆ ನಂತರ ಕುವೆಂಪು ರಚಿತ ಭಾವಗಿತೆಯೊಂದನ್ನು ಸೊಗಸಾಗಿ ಹಾಡಿದರು. ಈ ವೇಳೆ ಭಕ್ತಿಪೂರ್ವಕ ಎರಡು ದಾಸರಪದ, ವಚನ ಹಾಗೂ ಜನಾಪೇಕ್ಷೆ ಮೇರೆಗೆ ಬಂದ ಭಕ್ತಿ ಹಾಡುಗಳು ಹಾಡಿ ಕೊನೆಯಲ್ಲಿ ಸಭಿಕರ ಕೋರಿಕೆಯಂತೆ ಗಝಲ್ ಪ್ರಸ್ತುಪಡಿಸಿ ಸೌಂಡ್ ಆಫ್ ಮೆಲೋಡಿಸ್‌ಗೆ ಅರ್ಥ ಕಲ್ಪಿಸಿದರು. ತಬಲಾದಲ್ಲಿ ವಿದ್ವಾನ್ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ಹಾರ್ಮೊನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ಸಾರಂಗಿ ವಾದನದಲ್ಲಿ ಸರ್ಪರಾಜ್‌ಖಾನ್, ಸಹಗಾನದಲ್ಲಿ ಫರಾಜ್‌ಖಾನ್ ಸಹಕರಿಸಿದರು.

300x250 AD

ಮೆಲೋಡಿಸ್ ಕಾರ್ಯಕ್ರಮವನ್ನು ಟಿಎಸ್‌ಎಸ್ ಪ್ರದಾನ ವ್ಯವಸ್ಥಾಪಕ ರವೀಶ ಹೆಗಡೆ ಉದ್ಘಾಟಿಸಿದರು. ಉಸ್ತಾದ್ ಫಯಾಜ್‌ಖಾನ್, ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಶೋಸಿಯೇಶನ್ ಉಪಾಧ್ಯಕ್ಷ ಸತೀಶ ಭಟ್ಟ ನಾಡಗುಳಿ, ಕಾರ್ಯದರ್ಶಿ ಜೆಮ್ಸ್ವಾಜ್, ಶಿವರಾಮ ಹೆಗಡೆ ಮತ್ತಿತರಿದ್ದರು. ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಶೋಸಿಯೇಶನ್‌ನ ಅಧ್ಯಕ್ಷ ದೀಪಕ ಹೆಗಡೆ ದೊಡ್ಡೂರು ಸ್ವಾಗತಿಸಿ ಕಲಾವಿದರನ್ನು ಗೌರವಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top