ಕಾರವಾರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರಕಾರ, ವಿಜ್ಞಾನ ಪ್ರಸಾರ, ದೆಹಲಿ, ಕರ್ನಾಟಕರಾಜ್ಯ ವಿಜ್ಞಾನ ಮತ್ತುತಂತ್ರಜ್ಞಾನ ಮಂಡಳಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಯೋಗದಲ್ಲಿ 10ನೇ ತರಗತಿಯ ವಿಜ್ಞಾನ ಹಾಗೂ ಗಣಿತ ವಿಷಯದ ಪಠ್ಯಕ್ರಮದಲ್ಲಿ ಬರುವ ಕ್ಲಿಷ್ಟಕರ ವಿಷಯದ ಮೇಲೆ ಪ್ರೌಢಶಾಲೆಗಳ ಗಣಿತ ಹಾಗೂ ಭೌತಶಾಸ್ತ್ರ ಶಿಕ್ಷಕರಿಗೆ ‘ಕಾರ್ಯಾಗಾರ’ವನ್ನು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆ.17ರಿಂದ 19ರವರೆಗೆ ಮೂರು ದಿನಗಳ ಕಾಲ ನಡೆಯಿತು.
ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ ಕಾರ್ಯಾಗಾರ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ್, ಕಾರ್ಯಾಗಾರದ ರೂಪೋದ್ದೇಶ ಹಾಗೂ ಅವರ ಸಂಸ್ಥೆಯ ಕಾರ್ಯಗಳ ಬಗ್ಗೆ ಶಿಕ್ಷಕರಿಗೆ ತಿಳಿಸಿದರು. ಸಮಗ್ರ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ನಾಗರಾಜ ಗೌಡ, ವಿಜ್ಞಾನದ ಪ್ರಾಯೋಗಿಕ ಕಲಿಕೆಯಿಂದ ಜ್ಞಾನ ವಿಕಸನವಾಗುತ್ತದೆ. ವಿಜ್ಞಾನ ವಿಶಿಷ್ಟವಾದ ಜ್ಞಾನ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೆಎಸ್ಸಿಎಸ್ಟಿಯ ಪ್ರಿಯಾಂಕಾ ಹಾಗೂ ನಾಗಾರ್ಜುನ ಇವರು ಇದ್ದರು.
ಗಣಿತ ಹಾಗೂ ಭೌತಶಾಸ್ತ್ರ ವಿಷಯಕ್ಕೆ ನಿವೃತ್ತ ಗಣಿತ ಉಪನ್ಯಾಸಕ ಬಿ.ಕೆ.ಸಾವಂತ, ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಗಣಿತ ಉಪನ್ಯಾಸಕಿ ಪೂರ್ವಿ ಹಳಗೇಕರ್, ಅಂಗಡಿಯ ಸೆಕೆಂಡರಿ ಇಂಗ್ಲೀಷ್ ಸ್ಕೂಲ್ ಸಂಜಯ ನಾಯ್ಕ, ಶಾರದಾಂಬಾ ಪ್ರೌಢಶಾಲೆ ಪ್ರಾಂಶುಪಾಲರಾದ ವಸಂತ ಹೆಗಡೆ, ಸರಕಾರಿ ಪದವಿಪೂರ್ವ ಕಾಲೇಜಿನ ಶ್ರೀನಿವಾಸ ಭಟ್, ಪ್ರಿಮಿಯರ್ ಕಾಲೇಜಿನ ವಿನೋದ ಕೊಠಾರಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಸಮಾರೋಪ ಸಮಾರಂಭಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿ ವಿನೋದ ಅಣ್ವೇಕರ್ ಉದ್ಘಾಟಕರಾಗಿ ಹಾಗೂ ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎನ್.ನಾಯಕ, ಉಮೇಶ ವಾಯ್.ಕೆ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕರು ಕಾರ್ಯಾಗಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊ0ಡರು. ವಲಯ ಅರಣ್ಯಾಧಿಕಾರಿ ಪ್ರಮೋದ ಎಂ. ಕಡಲಾಮೆ ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಆಗಮಿಸಿದ ಸರ್ವರನ್ನು ಎನ್ಆರ್ಡಿಎಮ್ಎಸ್ ತಾಂತ್ರಿಕ ಅಧಿಕಾರಿ ಅನಿಲ ಆರ್.ನಾಯ್ಕ ಸ್ವಾಗತಿಸಿದರು. ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ವಂದಿಸಿದರು. ಕವಿತಾ ಬಾಡಕರ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಾಗಾರದಲ್ಲಿ 49 ಶಿಕ್ಷಕರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಶಿಕ್ಷಕರಿಗೆ ಪ್ರಮಾಣಪತ್ರವನ್ನು ನೀಡಲಾಯಿತು.