Slide
Slide
Slide
previous arrow
next arrow

ಹೆಬ್ಬಾರ್ ವಿಶೇಷ ಪ್ರಯತ್ನ: ಕಳಚೆ ಪ್ರೌಢಶಾಲೆ ಹುಣಶೆಟ್ಟಿಕೊಪ್ಪಕ್ಕೆ ಶಿಫ್ಟ್ 

300x250 AD


ಯಲ್ಲಾಪುರ: ತಾಲೂಕಿನ ಕಳಚೆಯ ಸರಕಾರಿ ಪ್ರೌಢಶಾಲೆಯಲ್ಲಿ ಶೂನ್ಯ ದಾಖಲೆ ಹೊಂದಿದ್ದು, ಸರಕಾರ ಈ ಶಾಲೆಯನ್ನು ಮುಚ್ಚುವ ತೀರ್ಮಾನವನ್ನು ಕೈಗೊಂಡಿತ್ತು. ಶಾಸಕ ಶಿವರಾಮ ಹೆಬ್ಬಾರ್ ಅವರ ವಿಶೇಷ ಪ್ರಯತ್ನ ಫಲವಾಗಿ ಕಳಚೆ ಪ್ರೌಢಶಾಲೆಯನ್ನು ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಣಶೆಟ್ಟಿಕೊಪ್ಪಕ್ಕೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸುವಂತೆ ಸರಕಾರ ಆದೇಶ ನೀಡಿದೆ.

ಶೂನ್ಯ ದಾಖಲಾತಿಯನ್ನು ಹೊಂದಿರುವ ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯನ್ನು ಸ್ಥಳಾಂತರಿಸುವುದರಿಙದ, ಈ ಭಾಗದ ಕರಡೊಳ್ಳಿ, ಕಳಸೂರು, ಹುಲಗೋಡ, ಬಸಳೆಬೈಲ್ ಹಾಗೂ ಖಂಡ್ರಾನಕೊಪ್ಪ ಸೇರಿದಂತೆ ಹಲವಾರು ಭಾಗದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣವನ್ನು ಪಡೆಯುವುದಕ್ಕೆ ಅನುಕೂಲವಾಗಲಿದೆ. ತಮ್ಮೂರಿನಲ್ಲಿಯೆ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸಲಿದೆ.

ಈ ಭಾಗದಲ್ಲಿ ಪ್ರೌಢಶಾಲೆಯನ್ನು ಮಂಜೂರುಗೊಳಿಸುವ ದೂರದೃಷ್ಟಿಯಿಂದ ಶಾಸಕರು ತಾವು ಸಚಿವರಾದ ಅವಧಿಯಲ್ಲಿ ಇಂಡೋ- ಮಿಮ್ ಕಂಪನಿಯ ಸಿ.ಎಸ್.ಆರ್ ಅಡಿಯಲ್ಲಿ 4 ತರಗತಿಯ ಕೊಠಡಿಯನ್ನು ಮಂಜೂರಿಗೊಳಿಸಿದರು. ಕೊಠಡಿಯ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಇನ್ನೂ ಕೆಲವು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಶಾಸಕ ಶಿವರಾಮ ಹೆಬ್ಬಾರ್ ಅವರು ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪ ಗ್ರಾಮಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರಿಗೆ ಈ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top