Slide
Slide
Slide
previous arrow
next arrow

ಅಂದರ್ ಬಾಹರ್: ನಾಲ್ವರ ವಿರುದ್ಧ ದೂರು

300x250 AD

ದಾಂಡೇಲಿ: ನಗರದ ಅಂಬೇವಾಡಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದು ನಗದನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ನಗರದ ಅಂಬೇವಾಡಿಯ ಕೆಪಿಸಿ ಕ್ವಾಟ್ರಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟಿ ಇಸ್ಪೀಟ್ ಎಲೆಯಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿಯನ್ನಾಧರಿಸಿ ನಗರ ಠಾಣೆಯ ಪಿಎಸ್‌ಐ ಐ.ಆರ್.ಗಡ್ಡೇಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿ, ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ತಂಡದಲ್ಲಿದ್ದ ಅಂಬೇವಾಡಿಯ ನಿವಾಸಿಗಳಾದ ಅಬ್ಬಾಸ್ ಮಹಮ್ಮದ್ ಗೌಸ್ ಲಾಲಾವಾಲೆ, ಸುಲೇಮಾನ್ ಅಬ್ದುಲ್ ರೆಹಮಾನ್ ಕುಟ್ಟಿ, ಮೋಹಿದ್ದೀನ್ ಬಾಬಾಸಾಬ ಸೈಯದ್‌ರನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂದರ್ಭದಲ್ಲಿ ನಗದು ರೂ.5820ನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಸಲೀಂ ಅಬ್ದುಲ್ ರೆಹಮಾನ್ ಕುಟ್ಟಿ ಪರಾರಿಯಾಗಿದ್ದಾನೆ. ಆರೋಪಿಗಳ ಮೇಲೆ ಕಲಂ 87 ಕೆ.ಪಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top