ಕಾರವಾರ: ಕೆನರಾ ವೆಲ್‌ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯಿಂದ ನಗರದ ಹಿಂದೂ ಪ್ರೌಢಶಾಲೆಯಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಪದ್ಮಪುಷ್ಪ ವೇದವೇದಾಂತ ಗುರುಕುಲದ ಪ್ರಾಚಾರ್ಯ ಶಿವಮೂರ್ತಿ ಜೋಯಿಸ್, ಇಂದ್ರಿಯಗಳು ಕೆಟ್ಟದ್ದರಲ್ಲೋ, ಒಳ್ಳೆಯದ್ದರಲ್ಲೋ ಪರಿವರ್ತಿಸಲು ಮನಸ್ಸೇ ಕಾರಣವಾಗಿದೆ. ಮನಸ್ಸು ಸ್ಥಿರವಾಗಿರಬೇಕು. ಈ ನಿಟ್ಟಿನಲ್ಲಿ ಸಂಗೀತವು ಪ್ರಮುಖ ಪಾತ್ರವಹಿಸುತ್ತದೆ. ಮನಸ್ಸಿನ ಪ್ರಸನ್ನತೆ, ಸೌಮ್ಯತೆ, ಮೌನ, ಆತ್ಮಸಂಯಮ ಮತ್ತು ಭಾವಶುದ್ಧಿ ಇವು ಮಾನಸಿಕ ತಪಸ್ಸಾಗಿದೆ ಎಂದರು.
ಸಮತಿ ದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ ಶೇಟ್ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ನ ಅಧ್ಯಕ್ಷ ಎಂ.ಪಿ.ಕಾಮತ, ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ, ದಿವೇಕರ ಕಾಲೇಜಿನ ಪ್ರಾಚಾರ್ಯ ಕೇಶವ ಕೆ.ಜಿ., ಹರೀಶ ಕಾಮತ, ಪ್ರಶಾಂತ ನಾಯ್ಕ, ರಾಜು ನಾಯ್ಕ, ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ, ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜಲಿ ಮಾನೆ ಇದ್ದರು.
ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು. ಮಾರುತಿ ನಾಯ್ಕ ಹಾರ್ಮೋನಿಯಂ, ಗಣಪತಿ ಹೆಗಡೆ, ರಾಜೇಶ ಪ್ರಭು ತಬಲಾ ಸಾಥ್ ನೀಡಿದರು. ಸಾಯಿಶ್ರೀ ಶೇಟ್, ಶ್ರೇಯಾ ನಾಯ್ಕ, ದಿಶಾ ಶಾನಭಾಗ ಪ್ರಾರ್ಥಿಸಿದರು. ವೀಣಾ ಭಾಗ್ವತ ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ವೇದಾ ನಾಯ್ಕ ವಂದಿಸಿದರು. ಪ್ರೇಮಾ ಟಿಎಂಆರ್ ನಿರೂಪಿಸಿದರು.