• Slide
    Slide
    Slide
    previous arrow
    next arrow
  • ಹುಣಸೇಮಡಗಿ ಕ್ರಾಸ್‌ನಲ್ಲಿ ಹುಣಸೆ ಗಿಡ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

    300x250 AD

    ಅಂಕೋಲಾ: ಇಲ್ಲಿನ ಹುಣಸೇಮಡಗಿ ಕ್ರಾಸ್ ಎಂದು ಹೆಸರಾದ ಬೆಳಸೆ ಆಗೇರಕೇರಿ ಊರಿನ ಹೆದ್ದಾರಿಯಂಚಿನಲ್ಲಿ ಸ್ವಾತಂತ್ರ‍್ಯೋತ್ಸವದ ದಿನ ಅರಣ್ಯ ಈಲಾಖೆ, ಊರವರು, ಶಾಲೆ, ಅಂಗನವಾಡಿಯವರು ಸೇರಿ ಹುಣಿಸೆಗಿಡಗಳನ್ನು ನೆಟ್ಟು ಹೆಸರು- ಹಸಿರು ಎರಡನ್ನೂ ಉಳಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದರು.
    ಸುಮಾರು ಇನ್ನೂರು ವರ್ಷಗಳ ಹಿಂದಿನಿ0ದಲೂ ಬೆಳಸೆ ಆಗೇರಕೇರಿಯ ಬಸ್ ನಿಲ್ದಾಣವೆಂದರೆ ಅದು ಎರಡು ಬೃಹತ್ ಹುಣಿಸೆ ಮರಗಳು ಆಚೀಚೆ ನಿಂತು ನೆರಳು ಕೊಡುವ ಸ್ಥಳ. ಬಸ್ ಚಾಲಕರಿಗೆ, ನಿರ್ವಾಹಕರಿಗೆ, ಅಲ್ಲಿ ಹತ್ತಿಳಿವ ಜನರಿಗೆ ಅದು ಹುಣಸೆ ಮಡಗಿ ಕ್ರಾಸ್ ಎಂದು ಹೆಸರಾಗಿತ್ತು. ಈಗ ಐದಾರು ವರ್ಷಗಳ ಆಚೆ ಹೆದ್ದಾರಿ ಅಗಲೀಕರಣದ ಕಾರಣ ಎರಡೂ ಹುಣಿಸೆ ಮರಗಳು ಬುಡ ಸಮೇತ ಇಲ್ಲವಾಗಿದ್ದವು. ಆದರೂ ಅದನ್ನು ಇಂದಿಗೂ ಹುಣಸೇ ಮಡಗಿ ಕ್ರಾಸ್ ಎಂದೇ ಜನ ಕರೆಯುತ್ತಿದ್ದರು. ಈಗ ಹಳೆಯ ಹೆಸರನ್ನು ಮುಂದಿನವರಿಗೆ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಧರ್ಮಾ ಆಗೇರ ಹಾಗೂ ಜನಾರ್ಧನ್ ಆಗೇರ ಅವರು ತಂದ ಹುಣಸೆ ಸಸಿಗಳನ್ನು ಇಲ್ಲಿನ ಶಾಲೆ ಹಾಗೂ ಅಂಗನವಾಡಿಯ ಮಕ್ಕಳು ಮತ್ತು ಊರವರು ಸೇರಿ ನೆಟ್ಟರು.
    ಈ ಸಂದರ್ಭದಲ್ಲಿ ಬೆಳಸೆ ಗ್ರಾಮ ಪಂಚಾಯತ ಸದಸ್ಯೆ ನಾಗವೇಣಿ ಆಗೇರ, ನಿವೃತ್ತ ನೌಕರರಾದ ಶಿವಾನಂದ ಆಗೇರ, ಶಾಲೆ ಮುಖ್ಯೋಪಾಧ್ಯಾಯರಾದ ರೇಣುಕಾ ರಮಾನಂದ, ಶಿಕ್ಷಕಿ ಸವಿತಾ ಗುನಗಾ, ಅಂಗನವಾಡಿ ಶಿಕ್ಷಕಿ ಪವಿತ್ರಾ ಆಗೇರ ಮುಂತಾದವರು ಇದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top