Slide
Slide
Slide
previous arrow
next arrow

ಎನ್‌ಎಸ್‌ಎಸ್‌ನಿಂದ ಬದುಕಿಗೆ ಶಿಸ್ತು: ಡಾ.ದೇವನಾಂಪ್ರಿಯ

300x250 AD

ಸಿದ್ದಾಪುರ: ನಮ್ಮ ವಿದ್ಯಾರ್ಥಿಗಳಿಗೆ ಇಡೀ ವರ್ಷದ ದೈನಂದಿನ ಚಟುವಟಿಕೆಗಳು ಮತ್ತು ವಾರ್ಷಿಕ ವಿಶೇಷ ಶಿಬಿರದ ಎಲ್ಲಾ ಕಾರ್ಯಕ್ರಮಗಳು ಸ್ಫೂರ್ತಿದಾಯಕವಾಗಿತ್ತು. ಅವರು ನಾಯಕತ್ವ ಗುಣ, ಸಮಾಜಮುಖಿಯಾದ ಆಲೋಚನೆ, ಸರಳತೆಯಲ್ಲಿ ಸಹಜತೆ ಅಂಶಗಳನ್ನು ಕಲಿತಿದ್ದಾರೆ. ನಾಳೆ ಬದುಕಿಗೆ ಅವೆಲ್ಲಾ ಪ್ರೇರಣಾದಾಯಕವಾಗಲಿ. ಎನ್‌ಎಸ್‌ಎಸ್ ನಮ್ಮ ಬದುಕಿಗೆ ಶಿಸ್ತನ್ನು ಕಲಿಸಿಕೊಡುತ್ತದೆ ಎಂದು ಎಂಜಿಸಿ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ದೇವನಾಂಪ್ರಿಯ ಎಂ.ರವರು ಹೇಳಿದರು.

ಅವರು ಸ್ಥಳೀಯ ಎಂಜಿಸಿ ಕಲಾ, ವಾಣಿಜ್ಯ ಹಾಗೂ ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ವಾತಂತ್ರö್ಯ ಹೋರಾಟಗಾರರ ಯಶೋಗಾಥೆ ನಿಮ್ಮಲಿ ದೇಶಪ್ರೇಮವನ್ನು ತುಂಬಲಿ. ಸುಖದೇವ,ಭಗತ್ ಸಿಂಗ್, ರಾಜಗುರು, ಚಂದ್ರಶೇಖರ ಆಜಾದ್ ಮೊದಲಾದವರು ದೇಶಕ್ಕಾಗಿ ಸಣ್ಣ ವಯಸ್ಸಿನಲ್ಲೇ ಪ್ರಾಣ ತ್ಯಾಗ ಮಾಡಿದರು. ಅವರ ತ್ಯಾಗ ಮೇಲೆ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೇಶ ಗುತ್ತಿಕರ ವಹಿಸಿದ್ದರು. ವೇದಿಕೆಯ ಮೇಲೆ ಎನ್.ಎಸ್.ಎಸ್. ಘಟಕ ನಾಯಕ ಸಾಯಿಕುಮಾರ, ಘಟಕ ನಾಯಕಿ ಪ್ರಗತಿ ಕೆ.ಯು. ಉಪಸ್ಥಿತರಿದ್ದರು. ಪ್ರತೀಕ ಭಟ್ ಸ್ವಾಗತಿಸಿದರು. ಆಶಿಕಾ ಗೌಡರ್ ನಿರೂಪಿಸಿದರು. ದಿವ್ಯ ಹೆಗಡೆ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಎನ್ನುವ ವಿಶೇಷವಾದ ವಿಡಿಯೋ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆ ಮೂಲಕ ಎನ್‌ಎಸ್‌ಎಸ್ ಘಟಕದ ಸಮಾರೋಪ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top