Slide
Slide
Slide
previous arrow
next arrow

ಹೊರ ದೇಶದ ಅಡಿಕೆ ಆಮದನ್ನು ನಿಷೇಧಿಸಲು ರೈತ ಸಂಘದ ಆಗ್ರಹ

300x250 AD

ಸಿದ್ದಾಪುರ: ಅಡಿಕೆ ಬೆಳೆಗಾರರು ಇಂದು ವಿವಿಧ ಕಾರಣಗಳಿಂದ ತುಂಬಾ ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಹೊರದೇಶಗಳಿಂದ ಆಮದಾತ್ತಿರುವ ಅಡಿಕೆಯನ್ನು ನಿಷೇಧಿಸಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಾ.ಕೆರಿಯಪ್ಪ ನಾಯ್ಕ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದ ವೈಪರಿತ್ಯದಿಂದಾಗಿ ಅಡಿಕೆ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಡು ಪ್ರಾಣಿಗಳಿಂದಲೂ ಕೂಡ ಅಡಿಕೆ ಹಾನಿಯಾಗುತ್ತಿದೆ. ಭೂತಾನ್ ದೇಶದಿಂದ ಆಮದಾಗುತ್ತಿರುವ ಅಡಿಕೆಯಿಂದ ಬೆಲೆ ಕಡಿಮೆಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರೈತರು ಸಾಲ ತುಂಬಲಾಗದ0ತ ಸ್ಥಿತಿ ತಲುಪಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವರ ಸಾಲಾ ಮನ್ನಾ ಮಾಡಬೇಕು ಎಂದರು.

300x250 AD

ಕೇoದ್ರ ಸರ್ಕಾರ ಭೂತಾನ್‌ದಿಂದ ಆಮದು ಮಾಡಿಕೊಳ್ಳುತ್ತಿರುವ ಅಡಿಕೆಯನ್ನ ನಿಲ್ಲಿಸಬೇಕು. ಜನಸಾಮಾನ್ಯರಿಗೆ ನೀಡುತ್ತಿರುವ ಪಡಿತರವನು ನಿಲ್ಲಿಸಿ ಅವರ ಖಾತೆಗಳಿಗೆ ಹಣವನ್ನು ಜಮಾ ಮಾಡಬೇಕು. ಇದರಿಂದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯ ಆಹಾರ ಸೇವಿಸುವವರು ಅವರದೇ ಆದ ಆಹಾರ ಪದ್ಧತಿಯನ್ನು ತೆಗೆದುಕೊಂಡು ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸೀತಾರಾಮ ನಾಯ್ಕ, ಜಿ.ಬಿ ನಾಯ್ಕ, ಗೀತಾ ಹೆಗಡೆ,ರಾಧಾ ಸೀತಾರಾಮ ನಾಯ್ಕ, ಎಂ.ಐ.ನಾಯ್ಕ ಕೋಲಶಿರ್ಸಿ, ಅಮ್ಮು ದ್ಯಾವಾ ಗೌಡ, ತಲಗಾರನ ಬಿಳಿಯ ರಾಮಗೌಡ, ಸಣ್ಣು ರಾಮ ಗೌಡ, ಮಹಾಬಲೇಶ್ವ ತಿಮ್ಮ ಗೌಡ, ವೆಂಕಟರಮಣ ಪುಟ್ಟ ಗೌಡ, ಬೀರ ರಾಮ ಗೌಡ, ಗೋಪಾಲ್ ಯಂಕ ಗೌಡ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top