ಶಿರಸಿ: 77ನೇ ಸ್ವಾತಂತ್ರ್ಯೋತ್ಸವವನ್ನು ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಆ. 15, ಮಂಗಳವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ಗೋಳಿಯ ಅಧ್ಯಕ್ಷ ಮಂಜುನಾಥ ಎಲ್. ಹೆಗಡೆ ಹಲಸಿಗೆ ಮುಂಜಾನೆ 8.30 ಗಂಟೆಗೆ ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ 2022-23ನೇ ಸಾಲಿನ ದತ್ತಿ ನಿಧಿ ವಿತರಣಾ ಕಾರ್ಯಕ್ರಮ ನಡೆಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಎಂಟು ಹಾಗೂ ಒಂಬತ್ತನೇ ತರಗತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಿಸಲಾಯಿತು. ದಾನಿಗಳಾದ ಕೆ.ಆರ್. ಹೆಗಡೆ ಅಮ್ಮಚ್ಚಿ, ಎಸ್.ಎಂ.ಹೆಗಡೆ ಹುಡೆಕೊಪ್ಪ, ಎಂ.ಆರ್. ಹೆಗಡೆ ಪಟ್ಟಿಗುಂಡಿ, ಡಿ.ಜಿ. ಹೆಗಡೆ ಹನುಮಂತಿ, ಶಂಕರ ಸೀತಾರಾಮ ಹೆಗಡೆ ಹುಣಸೇಕೊಪ್ಪ ಇವರುಗಳು ಉಪಸ್ಥಿತರಿದ್ದು ತಮ್ಮಅಮೃತ ಹಸ್ತದಿಂದ ಮಕ್ಕಳಿಗೆ ದತ್ತಿನಿಧಿ ವಿತರಿಸಿ ಹರಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಮಂಜುನಾಥ ಎಲ್. ಹೆಗಡೆ ಹಲಸಿಗೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಗೌಡ ಮಳಲಿ, ಕಾರ್ಯದರ್ಶಿಗಳಾದ ಶಿವಾನಂದ ಹೆಗಡೆ ಉಗ್ರೇಸರ, ಕೋಶಾಧ್ಯಕ್ಷರಾದ ರಮೇಶ್ ಭಟ್ಟ ಅಬ್ಬಿಹದ್ದ, ಸದಸ್ಯರಾದ ಮಹೇಶ್ ಭಟ್ ನಾಡಗುಳಿ, ಸಿ.ಎಸ್ ಹೆಗಡೆ ನೇರಲಹದ್ದ ,ಗಜಾನನ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.
ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ನಾರಾಯಣದೈಮನೆ ಸ್ವಾಗತಿಸಿದರು. ಶ್ರೀಮತಿ ಮುಕ್ತಾ ಭಟ್ಟದತ್ತಿನಿಧಿ ಕಾರ್ಯಕ್ರಮ ವಿತರಣೆ ನಿರ್ವಹಿಸಿದರು.ಶ್ರೀಮತಿ ಶ್ರೀದೇವಿ ಎಸ್ ಪಾಟೀಲ್ ವಂದಿಸಿದರು. ಪಿ. ಮಂಜಪ್ಪಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಕಿರು ಮನರಂಜನಾ ಕಾರ್ಯಕ್ರಮ ನಡೆಯಿತು.