ಸಿದ್ದಾಪುರ: ತಾಲೂಕಿನ 12 ಗ್ರಾಮ ಪಂಚಾಯತಗಳಿಗೆ ಎರಡನೆ ಅವಧಿಗೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರುಗಳ ಆಯ್ಕೆ ಬುಧವಾರ ನಡೆಯಿತು.
ತ್ಯಾಗಲಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ದೊಡ್ಡಜಡ್ಡಿಯ ಯಶೋಧಾ ನಾಯ್ಕ, ಉಪಾಧ್ಯಕ್ಷರಾಗಿ ಕಲಗದ್ದೆಯ ವೆಂಕಟೇಶ್ ಹೆಗಡೆ ಅವಿರೋಧ ಆಯ್ಕೆಯಾಗಿದ್ದಾರೆ. ದೊಡ್ಮನೆ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕುಂಟೆಕುಣಿಯ ಶಾರದಾ ಹೆಗಡೆ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿಬಳೆಯ ಕಿರಣ ರಾಮಾ ನಾಯ್ಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಬೇಡ್ಕಣಿ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ತ್ಯಾರ್ಸಿಯ ಉಲ್ಲಾಸ್ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಡಕೇರಿಯ ಹೇಮಾವತಿ ನಾಯ್ಕ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಸೋವಿನಕೊಪ್ಪ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಸುಮಾ ಗೌಡ, ಉಪಾಧ್ಯಕ್ಷರಾಗಿ ಗಿರೀಶಕುಮಾರ ವಿ.ಶೇಟ್ ಆಲಮನೆ ಅವಿರೋಧ ಆಯ್ಕೆಯಾಗಿದ್ದಾರೆ. ನಿಲ್ಕುಂದ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ರಾಜಾರಾಂ ಹೆಗಡೆ, ಉಪಾಧ್ಯಕ್ಷರಾಗಿ ಕಬ್ಬಗಾರಗದ್ದೆಯ ಸವಿತಾ ಚೆನ್ನಯ್ಯ ಅವಿರೋಧ ಆಯ್ಕೆಯಾಗಿದ್ದಾರೆ.
ಇಟಗಿ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಹರಕನಹಳ್ಳಿಯ ಗಿರಿಜಾ ನಾಯ್ಕ, ಉಪಾಧ್ಯಕ್ಷರಾಗಿ ರಾಮಚಂದ್ರ ನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಹೆಗ್ಗರಣಿ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಹುಲ್ಲುಂಡೆಯ ಹರಿಜನ ಅನ್ನಪೂರ್ಣ, ಉಪಾಧ್ಯಕ್ಷರಾಗಿ ದೋಸೆಗದ್ದೆಯ ಮಂಜುನಾಥ ಮಡಿವಾಳ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಕಾನಗೋಡ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಶಿವರಾಯ ಜೆ.ಕೊತ್ವಲ್, ಉಪಾಧ್ಯಕ್ಷರಾಗಿ ನೀಡಗೋಡಿನ ರಂಗಮ್ಮ ಭೋವಿ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಕೊರ್ಲಕೈ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ನಟರಾಜ್ ಜಿಡ್ಡಿ, ಉಪಾಧ್ಯಕ್ಷರಾಗಿ ಭಾಗ್ಯ ಬಿಲ್ಛತ್ರಿ ಅವಿರೋಧ ಆಯ್ಕೆಯಾಗಿದ್ದಾರೆ.
ಬಿದ್ರಕಾನ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಹುಳಸೇಕೈ ಶ್ಯಾಮಲ ಕೆ.ಗೌಡ, ಉಪಾಧ್ಯಕ್ಷರಾಗಿ ಮುತ್ತಿಗೆಯ ಬಾಬು ನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಹಸ್ರಗೋಡ ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಕರ್ಜಗಿಯ ಪ್ರದೀಪ ಹೆಗಡೆ, ಉಪಾಧ್ಯಕ್ಷರಾಗಿ ಚಿಟ್ಟಮಾವನ ಶ್ರೀಲಕ್ಷ್ಮಿ ಹೆಗಡೆ ಅವಿರೋಧ ಆಯ್ಕೆಯಾಗಿದ್ದಾರೆ. ಕವಂಚೂರು ಗ್ರಾಮ ಪಂಚಾಯತದ ಅಧ್ಯಕ್ಷರಾಗಿ ಹಿತ್ಲಕೊಪ್ಪದ ವಿಶಾಲಾಕ್ಷಿ ಜಿಡ್ಡಿ, ಉಪಾಧ್ಯಕ್ಷರಾಗಿ ಕವಂಚೂರಿನ ವಿನೋದ ಹರಿಜನ ಅವಿರೋಧ ಆಯ್ಕೆಯಾಗಿದ್ದಾರೆ.