ದಾಂಡೇಲಿ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಬುಧವಾರ ಮಧ್ಯಾಹ್ನ ಜರುಗಿತು.
7 ಜನ ಸದಸ್ಯರನ್ನೊಳಗೊಂಡ ಆಲೂರು ಗ್ರಾ.ಪಂನ ಎರಡನೇ ಅವಧಿಗೆ ಅಧ್ಯಕ್ಷ ಗಾದಿಗೆ ನೂರಜಾನ ಇಮಾಮ್ ಸಾಬ್ ನಧಾಪ್ ಮತ್ತು ಜನಾಬಾಯಿ ಕೋಕರೆಯವರು ಸ್ಪರ್ಧಿಸಿದ್ದು, 5 ಮತಗಳನ್ನು ಪಡೆದ ನೂರಜಾನ ಇಮಾಮ್ ಸಾಬ್ ನಧಾಪ್ ಅವರು ಅರ್ಹವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಹುದ್ದೆಗೆ ನಾಗರತ್ನಾ ಸುರೇಶ್ ನಾಯ್ಕ ಮತ್ತು ಸುಭಾಷ್ ಬೋವಿವಡ್ಡರ್ ಅವರು ಸ್ಪರ್ಧಿಸಿದ್ದರು. 4 ಮತಗಳನ್ನು ಪಡೆದ ನಾಗರಾತ್ನಾ ನಾಯ್ಕ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಅಭಯ್.ಎಸ್.ವಾಡಕರ್ ಅವರು ಕಾರ್ಯನಿರ್ವಹಿಸಿದ್ದರು.
ಕೋಗಿಲಬನ-ಬಡಕಾನಶಿರಡಾ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಾರ್ವತಿ ಹರಿಜನ ಮತ್ತು ಉಪಾಧ್ಯಕ್ಷೆಯಾಗಿ ಮಂಜುಳಾ ರಜಪೂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೋಗಿಲಬನದಲ್ಲಿರುವ ಗ್ರಾಮ ಪಂಚಾಯ್ತು ಕರ‍್ಯಾಲಯದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಬುಧವಾರ ಚುನಾವಣಾಧಿಕಾರಿ ಎನ್.ವಿ.ಪಾಟೀಲ್ ಅವರ ನೇತೃತ್ವದಲ್ಲಿ ಜರುಗಿತು. ಒಟ್ಟು 7 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆಯಿತು.