ಕುಮಟಾ: ತಾಲೂಕಿ ಮುರೂರಿನ ಮಡಕಿಬೈಲ್’ನಲ್ಲಿನ ನಿವಾಸಿ ನಾಗರಾಜ್ ಗಾವಡಿ ಎಂಬಾತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ರೈತಾಪಿ ಕೆಲಸ ಹಾಗೂ ಕರೆಂಟ್ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತ ಮೂರೂರಿನ ನೆಲಬಾವಿಯಲ್ಲಿ ಕಾಲು ತೊಳೆಯಲು ಹೋದಾಗ ಜಾರಿ ಬಿದ್ದು ಸಾವನಪ್ಪಿದ್ದಾನೆಂದು ತಿಳಿದುಬಂದಿದೆ. ನಂತರ ಘಟನಾಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ.