ನನ್ನ ರೆಕ್ಕೆ ಗಳ ಬಿಡಿಸೆಂದು ಹಕ್ಕಿ
ಹಾರುವುದಿನ್ನೂ ಬಾಕಿ ಇದೆ
ನೆಲವಿಲ್ಲಿದ್ದರೂ ಗುರಿ ಇದೆ
ಹಾರುವ ಆಗಸ ಬಾಕಿ ಇದೆ
ಇದು ಸೇವ್ ಶಾರದಾ ಕಮಿಟಿಯ ಸ್ಥಾಪಕ ಮತ್ತು ಅಧ್ಯಕ್ಷ ರವೀಂದ್ರ ಪಂಡಿತಾ ಮಾತೆ ಶಾರದೆಯ ಕುರಿತು ಕೈಗೊಂಡ ಧೃಡ ನಿರ್ಧಾರಕ್ಕೆ ಅನ್ವಯಿಸುತ್ತದೆ. ಗೃಹಮಂತ್ರಿ ಅಮಿತ್ ಶಾ ಶಾರದಾ ಪೀಠವನ್ನು ಜನರ ಪ್ರವೇಶಕ್ಕೆ ತೆರೆಯಲಾಗಿದೆ ಎಂಬ ಸಂದೇಶ ನೀಡಿದ್ದಾರೆ. ಇದೊಂದು ನವ ಯುಗದ ಶುರು ಎಂದು ಬಣ್ಣಿಸಿದ್ದಾರೆ. ಕೇವಲ ಮಾತೆ ಶಾರದೆಯ ಆಶೀರ್ವಾದ ಅಲ್ಲದೇ ನಮ್ಮೆಲ್ಲರ ಸಮುಚಿತ ಪ್ರಯತ್ನದ ಫಲ ಎಂದಿದ್ದಾರೆ. ಇದಕ್ಕಾಗಿ ರವೀಂದ್ರ ಪಂಡಿತರು ಸೇರಿದಂತೆ ಸಮಸ್ತ ಶ್ರದ್ಧಾಳುಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದು ಸುಲಭದ ಪಯಣವಲ್ಲ. ಇದೊಂದು ಸಂಘರ್ಷದ ಹಾದಿ.
ರವೀಂದ್ರ ಪಂಡಿತಾ ಬರೆದ ಶಾರದಾ: ಕ್ವೆಸ್ಟ್ ಫಾರ್ ಶೇರ್ಡ್ ಹೆರಿಟೇಜ್ (ಹರಿದು ಹಂಚಿದ ತೀರ್ಥಕ್ಷೇತ್ರದ ಹುಡುಕಾಟ) ಪುಸ್ತಕದಲ್ಲಿ ಈ ಸ್ಮಾರಕದ ಸಂಘರ್ಷದ ವೃತ್ತಾಂತ ಕುರಿತು ಬರೆದಿದ್ದಾರೆ. ಅವರ ಪುಸ್ತಕ ಧೃಡ ನಿಶ್ಚಯ ಪರಿಶ್ರಮದ ಕತೆಗಿಂತ ಮಿಗಿಲಾಗಿ ಭಕ್ತರಿಗೆ ಪ್ರೇರಣಾದಾಯಿ ಸ್ರೋತ್ರ. ರವೀಂದ್ರ ಪಂಡಿತ ಹೇಳುವ ಹಾಗೆ ಇದೆಲ್ಲ ಶಾರದಾ ಮಾತೆಯ ಕೃಪೆ. ಆಕೆ ಸಂಗೀತ ಮತ್ತು ಜ್ಞಾನದ ದೇವಿಯಾಗಿದ್ದಾಳೆ. ಕಾಶ್ಮೀರ ಮಂಡಲದಲ್ಲಿ ನಮ್ಮ ಇಷ್ಟದೇವಿ. ಮೊದಲೆಲ್ಲ ಅದೆಷ್ಟು ಜನ ದೇಶವಿದೇಶದಿಂದ ಶಾರದಾ ಪೀಠಕ್ಕೆ ಓದಲು ಅಧ್ಯಯನ ಮಾಡಲು ಬರುತ್ತಿದ್ದರು. ಎಲ್ಲ ಅವಳದೇ ಕೃಪೆ ಇತ್ತು. ನಮ್ಮದೇನಿಲ್ಲ ಎಂದು ವಿನೀತ ಭಾವದ ನಗೆ ಚೆಲ್ಲುತ್ತಾರೆ, ಶಾರದಾ ಪೀಠದ ರೂವಾರಿ ರವೀಂದ್ರ ಪಂಡಿತಾ ಅವರು.
ಜ್ಞಾನ ಮತ್ತು ಅಧ್ಯಾತ್ಮದ ಸ್ರೋತ್ರ ಶಾರದಾ ಪೀಠದ ಕತೆ ಬದಲಾದ ಕಾಲಚಕ್ರದ ಜೀವಜ್ವಲಂತ ಉದಾಹರಣೆ. ಈ ಹೆಜ್ಜೆ ಕೇವಲ ಮಂದಿರ ಸ್ಥಾಪನೆ ನಿರ್ಮಾಣದ್ಧಲ್ಲ ಕಳೆದುಹೋದ ಶಾರದಾ ಸಭ್ಯತೆಯ ಪುನರುತ್ಥಾನ. ಇದು ವ್ಯಷ್ಟಿ ಸಮಷ್ಟಿಯ ಜೋಡಿಸುವ ಒಂದು ದಿವ್ಯ ಅನುಭೂತಿಯ ಶುರುವಾತಾಗಿದೆ ಎಂಬ ಮಾತು ಕೇಂದ್ರ ಗೃಹಸಚಿವರದ್ದು.
ಎಂಟನೇ ಶತಮಾನದಲ್ಲಿ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠ, ಜ್ಞಾನದಾತೆ ಶಾರದೆಗೆ ಸಮರ್ಪಿತ ಪ್ರಾಚೀನ ಮಂದಿರ. ಹದಿನೆಂಟು ಮಹಾಶಕ್ತಿ ಪೀಠಗಳಲ್ಲಿ ಒಂದಾದ ಪವಿತ್ರ ಕ್ಷೇತ್ರ. ಆದರೆ ಇತಿಹಾಸದ ಪುಟಗಳಲ್ಲಿ ಅಂಟಿಕೊಂಡ ಇದರ ಪತನ ಗಾಥೆ ದೌರ್ಭಾಗ್ಯ ಪೂರ್ಣ ಚರಿತ್ರೆ. ಯಾವುದೇ ಪವಿತ್ರ ಮಂದಿರ ಕ್ಷೇತ್ರಗಳ ನಾಶ ಯಶಸ್ವಿಯಾದರೂ ಕೂಡ ಅದು ವಿನಾಶಕ್ಕೆ ಹಾದಿ. ಶಾರದಾ ಮಂದಿರದ ಖಂಡಿತ ರೂಪ ಇದಕ್ಕೆ ನಿದರ್ಶನ .
1947ರ ಭಾರತ ಪಾಕಿಸ್ತಾನದ ವಿಭಜನೆಯ ತನಕ ಶಾರದಾ ಪೀಠ ಜಮ್ಮು ಕಾಶ್ಮೀರದಲ್ಲಿ ಶಾರದಾ ಪೀಠ, ಮಾರ್ತಾಂಡ ಮಂದಿರ ಅಮರನಾಥ ಗುಹೆ ಸಹಿತವಾಗಿ ಶ್ರದ್ಧಾಳುಗಳ ನಂಬಿಕೆಯ ಪ್ರತೀಕ ಆಗಿತ್ತು. ಸ್ವಾತಂತ್ರ್ಯ ನಂತರ ಸಿರಿಲ್ ರ್ಯಾಡ್ ಕ್ಲಿಫ್ ಎಳೆದ ಭಾರತ ಪಾಕ್ ಗಡಿ ವಿಭಜನಾ ರೇಖೆ ಡಿಸೆಂಬರ್ 19, 1948 ಕಬಾಲಿ ದಾಳಿಯ ನಂತರ ಈ ಮಂದಿರಗಳು ಹಿಂದುಗಳ ಪಾಲಿಗೆ ಮುಚ್ಚಿದವು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡುತ್ತಾ, ವಿಶ್ವರೂಪಿ ಬಾಬಾ ಅಮರನಾಥ , ಶಾರದಾ ಮಂದಿರ ಕುರಿತು ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎಂದಿದ್ದಾರೆ. ಕಾಶ್ಮೀರದ ಯೋಗಿ ಸ್ವಾಮಿ ನಂದಲಾಲ ಕೌಲರು ಶಾರದಾ ಪೀಠಾಸೀನರಾಗಿ ನಿರ್ವಹಿಸಿದ ಕೊನೆಯ ಸಂತ ಎನ್ನಲಾಗುತ್ತದೆ. ಅವರು ಶಾರದಾ ಪೀಠಕ್ಕೆ ಬಾಗಿಲು ಹಾಕಿ ಕುಪ್ವಾಡಾಕ್ಕೆ ನಡೆದರು. ಇದರ ನಂತರ ಶಾಸರದ ಮಂದಿರದ ಆಧ್ಯಾತ್ಮದ ಘಂಟೆಗಳು ನಿಶ್ಯಬ್ದವಾದವು. ಒಂದು ಕಾಲದ ಸಮೃದ್ಧ ಪರಿಸರ ಕ್ರಮೇಣ ಶಿಥಿಲವಾಗಿ ಬಿತ್ತು.
ಕಾಲ ಹಾಗೇ ಇರುತ್ತದೆಯೇ? ಕಾಲ ಉರುಳಿತು . ಮಾತೆ ಶಾರದೆಯ ಮಂದಿರದ ಸಮೀಪವೇ ಶಾರದಾ ಮಂದಿರದ ಪುನರ್ನಿರ್ಮಾಣ ಕಾರ್ಯ ನಡೆಯಿತು. ಇದರ ನೇತೃತ್ವ ರವೀಂದ್ರ ಪಂಡಿತಾ ಅವರದ್ದು. ಅವರಿಗೆ ಈ ದಿಸೆಯಲ್ಲಿ ಅನೇಕ ಬಾಧೆಗಳೆದುರಾದವು. ಅವೆಲ್ಲವನ್ನು ದಾಟಿ ಕೊನೆಗೆ ತಮ್ಮ ಉದ್ದೇಶದಲ್ಲಿ ಸಫಲರೂ ಆದರು. ಶಾರದಾ ಮಂದಿರ ತಲೆ ಎತ್ತಿತು. 22 ಮಾರ್ಚ 2023 ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿಡಿಯೊ ಕಾನ್ಫರೆನ್ಸ್ ಮೂಲಕ ತೀತ್ವಾಲ್ ಕಾಶ್ಮೀರದ ಉದ್ಘಾಟನೆ ನೆರವೇರಿಸಿದರು.
ಕರ್ತಾರ್ ಪದದ ಕಾರಿಡಾರನನ್ನು ಶಾರದಾ ಮಂದಿರದವರೆಗೆ ವಿಸ್ತರಿಸುವ ರವೀಂದ್ರ ಪಂಡಿತರ ಮನವಿಯನ್ನು ಸರ್ಕಾರ ಮನಗಾಣುವುದೆಂದು ಆಶ್ವಾಸನೆ ಸಹ ಇತ್ತರು.
ಕಶ್ಮೀರಿ ಪಂಡಿತರು ಶಾರದಾ ಪೀಠದ ಮೇಲಕೆ ಆಳವಾದ ಶ್ರದ್ಧೆ ಹೊಂದಿದ್ದಾರೆ. ಬಲವಾದ ಸಂಬಂಧ ಹೊಂದಿದ್ದಾರೆ. ಆಧ್ಯಾತ್ಮಿಕ ಕೊಂಡಿಯಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ರವೀಂದ್ರ ಪಂಡಿತಾ ಅವರ ಗುದ್ಧಾಟಕ್ಕೆ ಹಾಗೂ ಶಾರದಾ ಪೀಠ ಸಮಿತಿಗೆ ಅಭಿನಂದನೆಗಳು.
- ಮಹಮ್ಮದ್ ರಯೀಸ್, ಮುಜಫರ್ ಬಾದ್ ಪಿಓಕೆ.
ಇಲ್ಲಿ ನಾವು ಕರ್ತಾರ್ಪುರದ ಮಾತು ಆಡುವಾಗ, ಭಾರತ ಸರ್ಕಾರವು ನನ್ಖಾನಾ ಯಾತ್ರೆ ನಡೆಸುತ್ತಿತ್ತು. ನನ್ಖಾನ್ ಸಾಹೇಬರಿಗಾಗಿ ಕರ್ತಾರ್ಪುರ ಕಾರಿಡಾರ್ ತೆರೆಯಲಾಯಿತು.2019ರಲ್ಲಿ ಡೇರಾ ಬಾಬಾರ ಹೊಸ ಕಾರತಿಡಾರ್ ತೆರೆಯ ಲಾಯಿತು. ಇಮಿಗ್ರೇಶನ್ ಸೆಂಟರ್ ಜೊತೆ ಮಾತುಕತೆ ಆಯಿತು. ಈ ಪ್ರಕರಣದಲ್ಲಿ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ. ನಮ್ಮ ಆರ್ಡಿ ದಾರಿಗಳನ್ನು ಮುಜಾಫರಾಬಾದ್, ರಾವಲಾಕೋಟ್ ಪೂಂಛ್ವಾಲಾ ಎಲ್ಒಸಿ ರಸ್ತೆಗಳನ್ನು ಮುಕ್ತವಾಗಿಸಲು ಕೋರಿಕೊಳ್ಳುತ್ತೇವೆ. ವಾರ್ಷಿಕ ಯಾತ್ರೆ ಆರಂಭಿಸಲು ವಿನಂತಿ ಮಾಡುತ್ತೇವೆ.
- ರವೀಂದ್ರ ಪಂಡಿತಾ.
ಶಾರದಾ ಯಾತ್ರೆ ಮಂದಿರ ತೀತ್ವಾಲ್ ಸಂಬಂಧಿಸಿದ ವಾದ ಪುಷ್ಟಿ ಪಡೆಯುತ್ತದೆ. ಈ ಮಂದಿರ ಕಾಶ್ಮೀರದ ತೀತ್ವಾಲ್ ಮತ್ತು ಕುಪ್ವಾಡಾದ ತೀರ್ಥಕ್ಷೇತ್ರ ಮಾರ್ಗದಲ್ಲಿದೆ. ಪ್ರಾಚೀನ ಕಾಲದಿಂದಲೂ ಪಂಚಾಂಗಾನುಸಾರ ಭಾದ್ರಪದ ಶುಕ್ಲ ಅಷ್ಟಮಿಯಂದು ಶಾರದಾ ಪೀಠದ ವಾರ್ಷಿಕ ಯಾತ್ರೆ ಆರಂಭವಾಗುತ್ತಿತ್ತು. ಆಗ ತೀತ್ವಾಲ್ ದಿಂದ ಶಾರದಾ ಪೀಠದವರೆಗೆ ಪವಿತ್ರ ಗದೆ ಅಥವಾ ಛಡೀ ಮುಬಾರಕ್ ಹೊರಡುತ್ತಿತ್ತು. ಶಾರದಾ ಪೀಠ ಅಧಿಕೃತ ತೀರ್ಥಯಾತ್ರೆ ನಾಲ್ಕು ಪಾರಂಪಾರಿಕ ಮಾರ್ಗಗಳಲ್ಲಿ ಕಾಣುತ್ತದೆ. ಕೇರನ್, ಲಿದ್ಧರ್ವನ್ ಜುವನ್ಗಡ್ ಗುರೇಜ್ ಮತ್ತು ತೀತ್ವಾಲ್ದಿಂದ ಹೊರಡುತ್ತಿತ್ತು. ಯಾವೊದೋ ಸಮಯದಲ್ಲಿ ಭಾರತ ಉಪಖಂಡದ ಶಿಕ್ಷಾ ಕೇಂದ್ರ ಶಾರದಾ ಪೀಠ ಜ್ಞಾನ ಮತ್ತು ಅಧ್ಯಾತ್ಮ ಬಿದ್ಯೆ ಪ್ರಾಪ್ತಿಗೆ ಶ್ರದ್ಧಾಳುಗಳನ್ನು ದೂರ ದೂರದಿಂದ ಸೆಳೆಯುತ್ತಿತ್ತು. ಶಾರದಾ ಪ್ರದೇಶದ ಒಂದು ಲಿಪಿಯ ಹೆಸರೇ ಶಾರದಾ. ಇದನ್ನು ಶಾರದಾ ಪೀಠದ ಶ್ರದ್ಧೆ ಮತ್ತು ಗೌರವದ ಸ್ಮೃತಿಯಲ್ಲಿ ಇಡೆಲಾಗಿದೆ.
ಶಾರದಾ ದೇವಿಯನ್ನು ಭಾರತೀಯ ಪರಂಪರೆಯಲ್ಲಿ ಸರಸ್ವತೀ ದೇವಿ ಎಂದು ಕರೆಯುತ್ತಾರೆ. ಪೂಜಿಸುತ್ತಾರೆ. ಪೌರಾಣಿಕ ಮಾನ್ಯತೆಗೆ ಬಂದಾಗ ಸತೀ ದೇವಿಯ ಬಲಗೈ ಇಲ್ಲಿ ಬಿತ್ತು ಎಂದು ಪ್ರತೀತಿ. ಹೀಗಾಗಿ ಶಾರದಾ ಪೀಠ ಮಹಾಶಕ್ತಿ ಪೀಠವಾಗಿ ನೆಲೆಯಾಗಿದೆ.
ಒಂದು ದಂತಕಥೆ ಪ್ರಕಾರ ಸಾಗರ ಮಂಥನ ಸಮಯದಲ್ಲಿ ಅಮೃತ ಕಲಶ ಪ್ರಕಟವಾಯಿತು. ಅದನ್ನು ಕೊಕ್ಕಿನಲ್ಲಿ ಮೈನಾವೊಂದು ಕಚ್ಚಿಕೊಂಡು ಹಾರಿತು. ಕೊನೆಗೆ ಕಲಶವನ್ನು ಶಾರದ ಪೀಠವಿದ್ದ ಸ್ಥಳದಲ್ಲಿ ಇರಿಸಿತು. ಇದರಿಂದಾಗಿ ಬಾಂದಿಪುರದ ಕಲೂಸಾ ಮತ್ತು ಕುಪ್ವಾಡಾದ ಗಲೂಸಾದಲ್ಕಿ ಅಮೃತದ ಹನಿ ಬಿತ್ತು. ಇದರಿಂದಾಗಿ ಅಲ್ಲಿ ಪ್ರಾಕೃತಿಕ ಶಿಲೆಯೊಂದು ರೂಪುಗೊಂಡಿತು.
ಇತರ ನಂಬಿಕೆಗಳ ಪ್ರಕಾರ, ಘೋರ ತಪಸ್ಸಿನ ನಂತರ ಋಷಿ ಶಾಂಡಿಲ್ಯ ತೇಜೋವನ ಹಳ್ಳಿಯ ಸಮೀಪ ಶಾರದಾ ಮಾತೆಯ ದರ್ಶನವಾಯಿತು. ದುರದೃಷ್ಟವಶಾತ್ ಇತಿಹಾಸಕಾಲದ ಪ್ರಮುಖ ತೀತ್ವಾಲ್ ಶಾರದಾ ಯಾತ್ರ ಮಂದಿರ ವಿಭಾಜನೆ, ಕಬಾಲಿ ಆಕ್ರಮಣಕಾರಿಗಳ ಆಕ್ರೋಶಕ್ಕೆ ಬಲಿ ಆಯಿತು.ಇದರ ಪರಿಣಾಮ ಸ್ವರೂಪವಾಗಿ ಮಂದಿರ ನಷ್ಟವಾಯಿತು. ಇಲ್ಲಿಂದ ಹೊರಡುವ ಪವಿತ್ರ ತೀರ್ಥಯಾತ್ರೆಗಳನ್ನೆಲ್ಲ ರದ್ದುಗೊಳಿಸಲಾಯಿತು.
ಇಂದು ಅಲ್ಲಿನ ನಾಗರಿಕ ಸಮಾಜ ಏನು ಹೇಳುತ್ತದೆ? ಕಾಶ್ಮೀರದ ಹಿಂದೂ ಭ್ರಾತೃಗಳ ಕುರಿತು ಸಕಾರಾತ್ಮಕ ನಿಲುವು ತಳೆದಿದೆ. ಕಜರ್ತಾರಪುರದಂತೆ ಶಾರದಾ ಯಾತ್ರಗೂ ಅವಕಾಶ ಕೊಡಬೇಕೆಂದು ಮುಸ್ಲಿಮರು ಸಹ ಹೇಳುತ್ತಾರೆ. ಹೀಗೆ ಜನರೆಲ್ಲ ಪ್ರಯತ್ನ ಪಡದಿದ್ದರೆ, ಸಹಕಾರ ಇರದಿದ್ದರೆ ಟೀಟ್ವಾಲ್ ದೇವಾಲಯ , ಶಾರದ ಮಂದಿರ ಈಡೇರದ ಕನಸಾಗುತ್ತಿತ್ತು.
ಸ್ವತಃ ಮುಸ್ಲಿಮರಾದರೂ ಶಾರದ ಪೀಠದ ಸ್ಮಾರಕ ನೋಡಿಕೊಳ್ಳುತ್ತಿದ್ದಾರೆ. ಬಂದವರಿಗೆ ಶೂ ಕಳಚಿ ಬರುವಂತೆ ಸೂಚನಾ ಫಲಕದ ವಿನಂತಿ ಮಾಡಿದ್ದಾರೆ. ಮಂತ್ರಗಳ ರೆಕಾರ್ಡ್ ಪ್ಲೇ ಮಾಡುತ್ತಾರೆ.
ತೀತ್ವಾಲ್ ನ ಮಂದಿರದ ಬಳಿ ಒಂದು ಗುರುದ್ವಾರ ಇತ್ತು.ಅದೂ ಕೂಡ ಈ ಮಂದಿರದಂತೇ ಆಕ್ರಮಣಕಾರಿಗಳ ದಾಳಿಗೆ ತುತ್ತಾಯಿತು. ಆದಾಗ್ಯೂ ಅಲ್ಲಿನ ಜನ ಮಂದಿರ ಪ್ರದೇಶವನ್ನು ಉಳಿಸಿದರು. 14ಸೆಪ್ಟೆಂಬರ್ 2021ರಂದುತೀತ್ವಾಲ್ನ ಎಲ್ಒಸಿ ಕೊನೆಯ ತುದಿಯವರೆಗೂ ವಾರ್ಷಿಕ ಶಾರದಾ ಯಾತ್ರೆಯ ಸಂದರ್ಭದಲ್ಲಿ ಸೇವ್ ಶಾರದಾ ಕಮಿಟಿಯ ಅಧ್ಯಕ್ಷ ರವೀಂದ್ರ ಪಂಡಿತಾ ಅವರಿಗೆ ಸಮರ್ಪಿಸಿದರು. ಹೊಸ ಮಂದಿರ ನಿರ್ಮಾಣ ಸಲುವಾಗಿ ಅಗೆದಾಗ ಅಲ್ಲಿ ಧ್ವಂಸವಾದ ಮಂದಿರದ ಅವಶೇಷಗಳು ದೊರೆತವು. ಹೊಸ ಮಂದಿರದ ನಿರ್ಮಾಣವು ಪ್ರಾಚೀನ ಮಂದಿರ ವನ್ನು ಗುರಿಯಾರಿಸಿವೇ ನೆರವೇರಿದೆ. ಇದಕಾಗಿ ಕರ್ನಾಟಕದ ಶೃಂಗೇರಿ ಶಾರದಾ ಪೀಠದಿಂದ ಕಳಿಸಿಕೊಟ್ಟ ಕೆತ್ತನೆ ಕಲ್ಲುಗಳನ್ನು ಬಳಸಲಾಗಿದೆ. ಸ್ಥಾಪನೆಗಾಗಿ ಶೃಂಗೇರಿ ಮಠವೇ ಶಾರದಾ ದೇವಿಯ ಪಂಚಲೋಹದ ವಿಗ್ರಹವನ್ನು ಉಡುಗೊರೆಯಾಗಿ ನೀಡಿದೆ. ಶಾರದೆಯ ಈ ಮೂರ್ತಿಯನ್ನು ಶಾಸ್ತ್ರೋಕ್ತ ವಾಗಿ ಸ್ಥಾಪಿಸಲಾಗಿದೆ. ಈ ಕಾರ್ಯಕ್ರವನ್ನು ಗುರು ತೃತೀಯದಂದು ದಿನಾಂಕ 24.01.2023 ಆರಂಭಿಸಲಾಯಿತು.
ಪ್ರಾಚೀನ ಕಾಲದಲ್ಲಿ ಶಾರದಾ ವಿಶ್ವವಿದ್ಯಾಲಯ ಗಳಲ್ಲಿ ಗುರು ತೃತೀಯ ವಿಶೇಷದ್ದಾಗಿತ್ತು. ವಾರ್ಷಿಕ ದೀಕ್ಷಾ ಕಾರ್ಯಗಳನ್ನು ಆಯೋಜಿಸುತ್ತಿದ್ದರು. ಈ ದಿನದ ಮಹತ್ವ ಮನಗಂಡು ದೇವಿಯ ಘರ್ ವಾಪಸಿ ಯಾತ್ರೆ ಆರಂಭವಾಯಿತು.
ಶಾರದಾ ಕಾರಿಡಾರ್ ಕುರಿತು
ಡಾ. ಜಿತೇಂದ್ರ ಸಿಂಗ್, ಕೇಂದ್ರ ಸಚಿವರು ಆಶ್ವಾಸನೆ ನೀಡಿದರು. ದೇವಿಯ ನಿರ್ಭೀತ ದರ್ಶನ ವ್ಯವಸ್ಥೆಗೆ ಭಾರತ ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು. ದೇವಿಯ ದಕ್ಷಿಣ ಭಾರತದಿಂದ ಉತ್ತರ ಗಡಿ ನಿಯಂತ್ರಣ ರೇಖೆ ತನಕದ ಪಯಣ ಚೈತ್ರ ಶುಕ್ಲ ಪ್ರತಿಪದೆ ಅಂದರೆ ವಸಂತ ನವರಾತ್ರಿಯ ಮೊದಲ ದಿನ ಸಂಪನ್ನಗೊಂಡಿತು. ಇದೇ ದಿನ 22.03.2023ರಂದು ಶಾರದಾ ಮಾತೆಯ ಮಂದಿರದಲ್ಲಿ ವಿಧಿ ವಿಧಾನಗಳೊಂದಿಗೆ ಮಂತ್ರಘೋಷ ಪೂರ್ವಕ ವಿಧಿವತ್ತಾಗಿ ಪ್ರತಿಷ್ಠಾಪನೆ ನೇರವೇರಿತು.
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ 24 ಜನವರಿಯಂದು ಶೃಂಗೇರಿಯಿಂದ ಶುರುವಾದ ರವೀಂದ್ರ ಪಂಡಿತರ ಯಾತ್ರೆಗೆ ಅಭಿನಂದನೆ ಸಲ್ಲಿಸಿದರು. ಆಧ್ಯಾತ್ಮದ, ಸಂಸ್ಕೃತಿಗಳ ಬಗ್ಗೆ ಗೌರವ ಭಾವನೆ ಪ್ರಕಟಪಡಿಸಿದರು.
ತೀತ್ವಾಲ್ ನಲ್ಲಿ ಶಾರದಾ ಪೀಠ ಸ್ಥಾಪನೆ ಆಯಿತು ಖರೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ಭಗ್ನವಾದ ಶಾರದೆ ಮಂದಿರದ ಅವಶೇಷ ಇಂದಿಗೂ ಭಕ್ತರ ನಿರೀಕ್ಷೆಯನ್ನು ಮಾಡುತ್ತಿದೆ. ನಿಯಂತ್ರಣ ರೇಖೆಯ ಎರಡೂ ಬದಿಯಿಂದ ನಾಗರಿಕ ಅದರ ಸಮಾಜ ನಡೆಸುವ ಅಭಿಯಾನ ಆ ಪರ್ವತದಲ್ಲಿ ಪ್ರಾಚೀನ ಮಂದಿರ ನಿರ್ಮಾಣವಾದರೆ ಸಾರ್ಥಕ ಅನಿಸುತ್ತದೆ. ಹಾಗಾದರೆ ಶಾರದಾ ಮಂದಿರಲ್ಲಿ ಶಂಖ ಜಾಗಟೆಗಳು ಮತ್ತೆ ಮೊಳಗುವುದು ಖಚಿತ. ಅಲ್ಲಿ ತನಕ ಸೇವ್ ಶಾರದಾ ಕಮಿಟಿಯ ಶಾರದೆ ಕನಸು ಅಪೂರ್ಣವೇ.
ನಮಸ್ತೇ ಶಾರದಾದೇವಿ ಕಾಶ್ಮೀರಪುರ ವಾಸಿನಿ|
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೆ ||
ಎಂಬ ಸ್ತೋತ್ರ ಈ ಜನ್ಮದಲ್ಲಾದರೂ ನನಸಾಗಲೆಂಬುದೆದ ಹಾರೈಕೆ.