ಶಿರಸಿ: 2023-24 ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ (NMEO-OP) ಯೋಜನೆಯಡಿ ತಾಳೆ ಬೆಳೆ ಬೇಸಾಯವನ್ನು ಉತ್ತೇಜಿಸಲು ತೋಟಗಾರಿಕೆ ಇಲಾಖೆಯಿಂದ ಆಯಲ್ ಪಾಮ್ ಪ್ಲಾಂಟೆಷನ್ ಮೆಗಾ ಡ್ರೈವ್ ಅನ್ನು ಲಾಂಚ್ ಮಾಡಲು ಪೂರ್ವಸಿದ್ದತೆ ಮಾಡಿದ್ದು. ಶಿರಸಿ ತಾಲೂಕಿಗೆ 10 ಹೇಕ್ಟರ್ ತಾಳೆ ಬೆಳೆ ಪ್ರದೇಶ ವಿಸ್ತರಣೆ ಗುರಿಯನ್ನು ನಿಗದಿಪಡಿಸಿದ್ದು. ಶಿರಸಿ ತಾಲೂಕಿನ ತಾಳೆ ಬೆಳೆ ಬೆಳೆಯಲು ಆಸಕ್ತಿ ಇರುವ ರೈತರು ಹೆಸರನ್ನು ತೋಟಗಾರಿಕೆ ಇಲಾಖೆಯಲ್ಲಿ ನೊಂದಾಯಿಸಲು ಕೋರಲಾಗಿದೆ.