• Slide
    Slide
    Slide
    previous arrow
    next arrow
  • ಡೇರೆ‌‌ ಮೇಳಕ್ಕೆ ಚಾಲನೆ

    300x250 AD

    ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಆವಾರದಲ್ಲಿ ಜು.22, 23 ಜುಲೈ ಈ ಎರಡು ದಿನಗಳ ಕಾಲ ನಡೆಯಲಿರುವ ಡೇರೆ ಮೇಳಕ್ಕೆ ಸಂಘದ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಎಸ್. ಹೆಗಡೆ, ಕಡವೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸಂಘಟಕರಾದ ಶ್ರೀಮತಿ ವೇದಾ ಹೆಗಡೆ ನೀರ್ನಳ್ಳಿ ಮತ್ತು ಶ್ರೀಮತಿ ಅಂಜನಾ ಭಟ್ಟ ಶಿರಸಿ, ಜ್ಯೋತಿ ಹೆಗಡೆ, ಕೆ.ಡಿ.ಸಿ.ಸಿ. ಬ್ಯಾಂಕ್‌ನ ಎ.ಜಿ.ಎಮ್ ಸುಮಾ ನಾಯ್ಕ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಮೇಳದಲ್ಲಿ ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವಂತ ವಿವಿಧ ಬಗೆಯ ಡೇರೆ, ಸೇವಂತಿಗೆ ಹಾಗೂ ಅನೇಕ ಅಲಂಕಾರಿಕ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದ್ದು, ಗ್ರಾಹಕರು ಹಾಗೂ ಸದಸ್ಯರು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top