Slide
Slide
Slide
previous arrow
next arrow

ಪರಿಸರ ರಕ್ಷಿಸಿ ನೈಸರ್ಗಿಕ ಅಸಮತೋಲನ ನಿಯಂತ್ರಿಸುವುದು ಮಾನವನ ಕರ್ತವ್ಯ: ಬ್ರಹ್ಮಾನಂದ ಸ್ವಾಮೀಜಿ

300x250 AD

ಶಿರಸಿ: ಪರಿಸರ ಮಾನವನ ಅವಿಭಾಜ್ಯ ಅಂಗ, ಪರಿಸರ ರಕ್ಷಿಸಿ, ಪೊಷಿಸಿ ನೈಸರ್ಗಿಕ ಅಸಮತೋಲನ ನಿಯಂತ್ರಿಸುವುದು ಮಾನವನ ಕರ್ತವ್ಯ. ಪರಿಸರ ನಾಶವಾದರೇ ಮಾನವನ ಸಂತತಿಯು ನಾಶವಾಗುವುದು. ಪರಿಸರ ಅಭಿವೃದ್ಧಿಯಲ್ಲಿ ಸಮಾಜವು ಗಂಭೀರವಾಗಿ ಚಿಂತಸಬೇಕೆಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಉಜಿರೆಯ ಸದ್ಗುರು ಶ್ರೀ ಶ್ರೀ ಶ್ರೀ ಬಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ, ಜಿಲ್ಲೆಯ 165 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ,1 ಲಕ್ಷ ಗಿಡ ನೆಡುವ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಮಠ ಉಜಿರೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಅರಣ್ಯ ಭೂಮಿ ಹಕ್ಕಿನ ಸಮಸ್ಯೆಗೆ ಸರಕಾರ ಸ್ಪಂದಿಸಬೇಕು. ಅರಣ್ಯವಾಸಿಗಳು ಅರಣ್ಯ ಪೂರಕವಾದ ಚಟುವಟಿಕೆಯಲ್ಲಿ ಕಾರ್ಯ ನಿರ್ವಹಿಸಬೇಕು. ಅರಣ್ಯ ರಕ್ಷಣೆ, ಸಂರಕ್ಷಣೆ ದಿಶೆಯಲ್ಲಿ ಇಂತಹ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು. ನೈಸರ್ಗಿಕ ವಿಕೋಪದಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ ಪರಿಸರ ಪೂರಕವಾದ ಅರಣ್ಯೀಕರಣ ಆಗಬೇಕೆಂದು ಅವರು ಹೇಳಿದರು.

ಪರಿಸರ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ದಿಶೆಯಲ್ಲಿ ಅರಣ್ಯವಾಸಿಗಳಿಂದಲೇ ಪರಿಸರ ಜಾಗೃತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ ಇಲಾಖೆಯ ಸಹಯೋಗವಿಲ್ಲದೇ ಅರಣ್ಯವಾಸಿಗಳಿಂದಲೇ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಾಸ್ತವಿಕ ಮಾತನಾಡುತ್ತಾ ಹೇಳಿದರು.

300x250 AD

ಕಾರ್ಯಕ್ರಮದಲ್ಲಿ ಯಲ್ಲಾಪುರ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಹಿರಿಯ ವಕೀಲ ಆರ್.ಜಿ.ನಾಯ್ಕ, ಪದಾಧಿಕಾರಿಗಳಾದ ಸುನಿಲ್ ನಾಯ್ಕ ಸಂಪಖಂಡ , ರಾಘವೇಂದ್ರ ನಾಯ್ಕ ಕವಂಚೂರು, ದಿನೇಶ್ ನಾಯ್ಕ ಬೇಡ್ಕಣಿ, ಶೇಖರ್ ಸ್ವಾಮಿ, ಎಮ್.ಆರ್ ನಾಯ್ಕ ಕಂಡ್ರಾಜಿ, ಗಜಾನನ ಮರಾಠಿ ದೊಡ್ಮನೆ, ರವಿ ನಾಯ್ಕ ಸಿದ್ಧಾಪುರ, ಭಾಸ್ಕರ ನಾಯ್ಕ, ಉಮೇಶ್ ನಾಯ್ಕ ಬೇಡ್ಕಣಿ ಉಪಸ್ಥಿತರಿದ್ದರು.

ಸ್ವಾಮೀಜಿ ಪ್ರಶಂಸೆ:
ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿರುವ ಅರಣ್ಯವಾಸಿಗಳಲ್ಲಿ ಪರಿಸರ ಮತ್ತು ಅರಣ್ಯ ರಕ್ಷಣೆ ಕುರಿತು ಜಾಗೃತೆ ಮೂಡಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದಲೇ 1 ಲಕ್ಷ ಗಿಡ ನೆಡುವ ಕಾರ್ಯಕ್ರಮ ಸಾರ್ವಜನಿಕ ಪ್ರಶಂಸೆಯ ಕಾರ್ಯ. ಇಂತಹ ಕಾರ್ಯಕ್ರಮಕ್ಕೆ ನಿಸರ್ಗ ಮತ್ತು ದೇವರ ಆಶಿರ್ವಾದ ಸದಾ ಇರುತ್ತದೆ ಹಾಗೂ ನನ್ನ ಬೆಂಬಲವೂ ಇದೆ ಎಂದು ಬಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಅಧ್ಯಕ್ಷ ರವೀಂದ್ರ ನಾಯ್ಕ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು.

Share This
300x250 AD
300x250 AD
300x250 AD
Back to top