Slide
Slide
Slide
previous arrow
next arrow

ಯುವಪೀಳಿಗೆಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ಕುರಿತ ಅರಿವು,ಆಸಕ್ತಿಯನ್ನು ಬೆಳೆಸಬೇಕಿದೆ: ನರಸಿಂಹ ಹೆಗಡೆ

300x250 AD

ಶಿರಸಿ: ಉತ್ತರ ಕನ್ನಡದ ಯುವಜನತೆಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಹೆಚ್ಚು ಅರಿವು ಮತ್ತು ಆಸಕ್ತಿಯನ್ನು ನಾವು ಕಾಣುತ್ತಿಲ್ಲ. ಅವರಿಗೆ ಉತ್ತೇಜನದ ಅಗತ್ಯತೆ ಇದೆ. ಇಂತಹ ಕಾರ್ಯಕ್ರಮ ನಾಗರಿಕ ಸೇವೆ ಪರೀಕ್ಷೆಗಳಿಗೆ ಪ್ರಯತ್ನಿಸಲು ಪ್ರೇರಣೆಯಾಗಬೇಕು ಎಂದು ಅಶೋಕ್ ಲೈಲ್ಯಾಂಡ್ ಕಂಪನಿಯ ವಿಶ್ರಾಂತ ಹಿರಿಯ ಉಪಾಧ್ಯಕ್ಷ ನರಸಿಂಹ ಹೆಗಡೆ ಬಾಳೆಗದ್ದೆ ಹೇಳಿದರು.

 ಅವರು ನಗರದ ಎಂ. ಇ ಎಸ್ ನ ಎಂ. ಎಂ. ಕಲಾ ಮತ್ತು ವಿಜ್ಞಾನ  ಮಹಾವಿದ್ಯಾಲಯದ ಐಕ್ಯೂಎಸಿ, ಐಐಸಿ ಹಾಗೂ ಪ್ಲೇಸ್ಮೆಂಟ್ ಸೆಲ್ ಮತ್ತು  ಸ್ವರ್ಣವಲ್ಲೀ ಮಠದ ಸ್ವರ್ಣ ರಶ್ಮಿ(ಸ್ವಯಂ) ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ `ನಾಗರೀಕ ಸೇವಾ ಪರೀಕ್ಷೆಗಳ ಜಾಗೃತಿ ಅಭಿಯಾನ’  ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಾಗರಿಕ ಸೇವೆಯಲ್ಲಿ ಕೆಲಸ ಮಾಡುವುದು ಕಾರ್ಪೊರೇಟ್ ಜಗತ್ತಿಗಿಂತಲೂ ಭಿನ್ನವಾಗಿದ್ದು, ಅದ್ಭುತವಾದ ಅನುಭವವನ್ನು ನೀಡುತ್ತದೆ. ನಾವೆಲ್ಲ ಹುಟ್ಟಿದ ತಕ್ಷಣದಿಂದ ಸಮಾಜದೊಂದಿಗೆ ಜೀವಿಸುತ್ತೇವೆ. ಹಾಗಾಗಿ ಸಮಾಜಕ್ಕೆ ಉತ್ತಮ ಸೇವೆ ಕೊಡುಗೆಯನ್ನು ನೀಡಬೇಕೆಂದರೆ ನಾಗರಿಕ ಸೇವೆ ಉತ್ತಮ ಮಾರ್ಗ.

 ಹಣವನ್ನು ಬೆನ್ನತ್ತಿ ಎಂದು ಹೋಗಬೇಡಿ ಯಶಸ್ಸು ಕಾಣಲು ನಿರಂತರವಾಗಿ ನಿಮ್ಮ ಶಕ್ತಿಯನ್ನು ಮೀರಿ ಪ್ರಯತ್ನಿಸಿ. ಅದೇ ನಿಮ್ಮನ್ನ ಸಂಪತ್ತಿನೆಡೆಗೆ ಕೊಂಡೊಯ್ಯತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿದ್ದ ಹುಬ್ಬಳ್ಳಿ ನೈರುತ್ಯ ರೈಲ್ವೆಯ ಅಧಿಕಾರಿ  ಸಂತೋಷ್ ಹೆಗಡೆ ಮುರೇಗಾರ್ ಮಾತನಾಡಿ ಭಾರತದ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಇದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಹಂತಗಳಿದ್ದು ಕಾರ್ಯಾಂಗದಲ್ಲಿ ಸಿವಿಲ್ ಸೇವೆಗಳು ಬರುತ್ತವೆ.

      ಸಿವಿಲ್ ಸೇವೆಗಳ ಬಗ್ಗೆ ತಿಳಿಸುತ್ತಾ ಈ ಕ್ಷೇತ್ರದಲ್ಲಿ IAS,IPS,IRS ಮುಂತಾದ ಸೇವೆಗಳಿವೆ. ಈ ಸೇವೆಗಳಿಗೆ ಸಿವಿಲ್ ಸೇವೆಗಳ ಪರೀಕ್ಷೆ ಮುಖಾಂತರ ನೇಮಕಾತಿ ನಡೆಯುತ್ತದೆ. ಸಿವಿಲ್ ಪರೀಕ್ಷೆ 3 ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದು ಪೂರ್ವಭಾವಿ ಪರೀಕ್ಷೆ, ಎರಡನೆಯದು ಮುಖ್ಯಪರಿಕ್ಷೆ, ಮೂರನೆಯದು ವ್ಯಕ್ತಿತ್ವ ಪರೀಕ್ಷೆಗಳು ಇರುತ್ತವೆ. ಈ ಸೇವೆಗಳಿಗೆ ಅರ್ಹತೆ ಪಡೆಯಲು ಕಠಿಣ ಪರಿಶ್ರಮದ ಜೊತೆಗೆ ಏಕಾಗ್ರತೆ ಮುಖ್ಯವಾಗಿರುತ್ತದೆ. ಹಾಗೆಯೇ ಈ ಪರೀಕ್ಷೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪ್ರತೀ ವರ್ಷವೂ ಈ ಪರೀಕ್ಷೆಯನ್ನು ಕರೆಯಲಾಗುತ್ತದೆ. ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶವಿದೆ ಎಂದು ತಿಳಿಸಿದರು. 

300x250 AD

ನಂತರ ಪರೀಕ್ಷೆಗೆ ಸಿದ್ಧವಾಗಲು ಅವಶ್ಯಕವಿರುವ ಅಧ್ಯಯನ ಸಾಮಗ್ರಿಗಳ ಕುರಿತು ತಿಳಿಸಿದರು. ಹಾಗೆಯೇ ವಿಶೇಷವಾಗಿ ಅವರ ಕಾರ್ಯ ಕ್ಷೇತ್ರವಾದ ರೇಲ್ವೆ ಹುದ್ದೆಗಳ ಕಾರ್ಯವಿಧಾನದ ಹಂತಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್ ಹಳೇಮನೆ ಹಿಂದೆ ಸ್ಪರ್ಧೆ ಇರಲಿಲ್ಲ, ಜನಸಂಖ್ಯೆ ಕಡಿಮೆ ಇತ್ತು. ಆದರೆ ದಿನಕಳೆದಂತೆ ಜನಸಂಖ್ಯೆ ಹೆಚ್ಚಾಯಿತು. ಶಿಕ್ಷಣ ಪಡೆಯುವವರ ಸಂಖ್ಯೆಯೂ ಹೆಚ್ಚಾಯಿತು. ಹಾಗಾಗಿ ಸ್ಪರ್ಧೆಯೂ ಕೂಡ ಹೆಚ್ಚಾಗಿದೆ ಎಂದರು.

 ಸ್ವಯಂನ ಶಿರಸಿ ತಾಲೂಕು ಅಧ್ಯಕ್ಷ ಆರ್.ಎಸ್. ಭಟ್ ಉಪಸ್ಥಿತರಿದ್ದರು.   ಸ್ವಾಗತಿಸಿ ಮಾತನಾಡಿದ ಐಕ್ಯುಎಸಿ ಸಂಚಾಲಕ ಡಾ.ಎಸ್.ಎಸ್ ಭಟ್  ವಿದ್ಯಾರ್ಥಿಗಳಲ್ಲಿ ಅಧಮ್ಯ ಶಕ್ತಿ ಅಡಗಿದೆ. ಅದನ್ನು ಗುರುತಿಸಿ ರಚನಾತ್ಮಕ ವ್ಯವಸ್ಥೆಗೆ ತರುವುದು ಎಲ್ಲ ಪ್ರಾಧ್ಯಾಪಕರ ಕರ್ತವ್ಯ. ಈ ನಿಟ್ಟಿನಲ್ಲಿ ಶಿಕ್ಷಕರೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗಣೇಶ್ ಹೆಗಡೆ ನಿರೂಪಿಸಿದರು. ಸ್ವರ್ಣ ರಶ್ಮಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಕಾಂತ್ ಹೆಗಡೆ ವಂದಸಿದರು.

Share This
300x250 AD
300x250 AD
300x250 AD
Back to top