ಕುಮಟಾ: ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಶಕ್ತಿಮೀರಿ ಪ್ರಯತ್ನಿಸಬೇಕು. ಈಗಂತೂ ಸಮೂಹ ಮಾಧ್ಯಮದಲ್ಲಿ ಮಹಿಳೆಯರ ಶೋಷಣೆ ಹಠಾತ್ತಾಗಿ ಸಾಗಿದೆ. ಅದು ನಿಲ್ಲಬೇಕು ಎಂದು ತಾಲೂಕಾ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ಅಭಿಪ್ರಾಯಪಟ್ಟರು.
ಅವರು ಇಲ್ಲಿ ರೋಟರಿ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ವೈಚಾರಿಕ ಸಭೆಯಲ್ಲಿ ಪಾಲ್ಗೊಂಡು ವಾರದ ಅತಿಥಿಯಾಗಿ ಮಾತನಾಡಿ, ಸರಕಾರ ಎಷ್ಟೇ ಸುಯೋಗ್ಯ ಕ್ರಮಗಳನ್ನು ಕೈಗೊಂಡರೂ, ಕಾನೂನು ಎಷ್ಟೇ ಪ್ರಬಲವಾಗಿದ್ದರೂ ಕೂಡ ಒಬ್ಬ ಮಹಿಳೆ ತನ್ನನ್ನು ತಾನು ಮೊದಲು ಅರಿತುಕೊಳ್ಳಬೇಕು ಎಂದರು.
ರೋಟರಿ ಅಧ್ಯಕ್ಷ ಎನ್.ಆರ್.ಗಜು ಸ್ವಾಗತಿಸಿದರು. ಕಾರ್ಯದರ್ಶಿ ರಾಮದಾಸ ಗುನಗಿ ನಿರೂಪಿಸಿ ವಂದಿಸಿದರು. ವಿನಾಯಕ ಆರ್, ನಾಯ್ಕ ಪರಿಚಯಿಸಿದರು. ವಿನಯ್ ನಾಯಕ ರೋಟರಿ ಧ್ಯೇಯವಾಕ್ಯ ವಾಚಿಸಿದರು. ಕೋಶಾಧ್ಯಕ್ಷ ಸಂದೀಪ ನಾಯಕ ಸೇರಿದಂತೆ ಅಪಾರ ಸಂಖ್ಯೆಯ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.