Slide
Slide
Slide
previous arrow
next arrow

ಮೊಹರಂ ಹಬ್ಬದ ನಿಮಿತ್ತ ದಾಂಡೇಲಿಯಲ್ಲಿ ಶಾಂತಿ ಸಭೆ

300x250 AD

ದಾಂಡೇಲಿ: ಬರಲಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯ ಆಶ್ರಯದಡಿ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಶಾಂತಿ ಪಾಲನಾ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ.ಎಸ್.ಲೋಕಾಪುರ ಅವರು ದಾಂಡೇಲಿಯ ಜನ ಶಾಂತಿ, ಸೌಹಾರ್ದತೆಗೆ ವಿಶೇಷವಾದ ಒತ್ತನ್ನು ಕೊಡುತ್ತಿರುವುದು ಶ್ಲಾಘನೀಯ. ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬoಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಬರಲಿರುವ ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಮತ್ತು ಶಾಂತಿ, ಸೌಹಾರ್ದತೆಯಿಂದ ನಡೆಸುವಂತೆ ವಿನಂತಿಸಿದರು. ನಗರದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ನಗರದ ನಾಗರಿಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ನಗರದ ಜನತೆ ಮುಕ್ತವಾಗಿ ಸಂಪರ್ಕಿಸಬಹುದೆ0ದು ಹೇಳಿದರು.

300x250 AD

ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಮಾತನಾಡಿ ಮೊಹರಂ ಹಬ್ಬವನ್ನು ಎಂದಿನoತೆ ಈ ವರ್ಷವೂ ಶಾಂತಿಯುತವಾಗಿ ಆಚರಿಸಬೇಕು. ನಗರಸಭೆ ಎಂದಿನ0ತೆ ಸ್ಪಂದಿಸಲಿದೆ ಎಂದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಯು.ಎಸ್.ಪಾಟೀಲ್ ಅವರು ನಗರದ ಜನತೆ ವರ್ಷ ಪೂರ್ತಿ ಶಾಂತಿಯುತವಾದ ವಾತವರಣವನ್ನು ನಿರ್ಮಿಸಿ, ದಾಂಡೇಲಿಯನ್ನು ಶಾಂತಿಯ ನಗರವನ್ನಾಗಿಸಿದ್ದಾರೆ. ಎಲ್ಲ ಧರ್ಮದ ಹಬ್ಬ ಹರಿದಿನಗಳನ್ನು ಪರಸ್ಪರ ಸೌಹಾರ್ದತೆಯ ಮೂಲಕ ಆಚರಿಸಿಕೊಳ್ಳುತ್ತಾ ನಗರದ ಜನತೆ ಬಂದಿದ್ದಾರೆ. ಈ ಬಾರಿಯೂ ಎಲ್ಲಾ ಮೊಹರಂ ಕಮೀಟಿಗಳು ಇಲಾಖೆಯ ಮತ್ತು ಸರಕಾರದ ನಿಯಾಮವಳಿಯಂತೆ ಹಬ್ಬವನ್ನು ಆಚರಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ ಮತ್ತು ಹೆಸ್ಕಾಂನ ಸಹಾಯಕ ಕರ‍್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಅವರು ತಮ್ಮ ತಮ್ಮ ಇಲಾಖೆಯ ಬಗ್ಗೆ ವಿವರಿಸಿ, ಸಹಕಾರದ ಭರವಸೆ ನೀಡಿ, ನಿಯಾಮವಳಿಗಳನ್ನು ಪಾಲಿಸುವಂತೆ ಕರೆ ನೀಡಿದರು. ಸಭೆಯಲ್ಲಿ ನಗರದ ವಿವಿಧ ಮೊಹರಂ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಿಎಸ್‌ಐ ಐ.ಆರ್.ಗಡ್ಡೇಕರ್ ಸ್ವಾಗತಿಸಿದರು. ತನಿಖಾ ವಿಭಾಗದ ಪಿಎಸ್‌ಐ ಯಲ್ಲಪ್ಪ ಎಸ್. ವಂದಿಸಿದರು. ನಾಗರಾಜ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top