ಕುಮಟಾ: ಇಲ್ಲಿಯ ಹೆಗಲೆ ಪ್ರಾಥಮಿಕ ಶಾಲೆಗೆ ರೋಟೇರಿಯನ್ ಸಿಎ ವಿನಾಯಕ ಹೆಗಡೆ ಅವರು 10 ಸಾವಿರ ರು. ಮೌಲ್ಯದ ಸ್ಟೀಲ್ ಕಪಾಟನ್ನು ರೋಟರಿ ಕ್ಲಬ್ ಮುಖಾಂತರ ದೇಣಿಗೆಯಾಗಿ ನೀಡಿದರು.
ಕಪಾಟನ್ನು ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ರಂಜನಾ ಹೆಗಡೆ, ನಮ್ಮ ಶಾಲೆ ಗ್ರಾಮೀಣ ಭಾಗದಲ್ಲಿದ್ದು ಹಾಲಕ್ಕಿ ಸಮುದಾಯದವರೇ ಅಧಿಕವಾಗಿರುವುದು ವಿಶೇಷ. ಶಾಲೆಯಲ್ಲಿ ಅತಿ ಮುಖ್ಯ ಕಾಗದ ಪತ್ರ, ಶಾಲಾ ದಾಖಲೆಗಳನ್ನು, ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವದೇ ದೊಡ್ಡ ಚಿಂತೆಯಾಗಿತ್ತು. ವಿನಾಯಕ ಹೆಗಡೆಯವರಲ್ಲಿ ನಾನು ವಾಸ್ತವವನ್ನು ನಿವೇದಿಸಿಕೊಂಡಾಗ ಅವರು ಕಪಾಟನ್ನು ರೋಟರಿ ಸಂಸ್ಥೆಯ ಮೂಲಕ ನೀಡಿ ಉಪಕೃತರಾಗಿದ್ದಾರೆ ಎಂದರು.
ಈ ಪ್ರಕ್ರಿಯಲ್ಲಿ ರೋಟರಿ ಅಧ್ಯಕ್ಷ ಎನ್.ಆರ್.ಗಜು, ಕಾರ್ಯದರ್ಶಿ ರಾಮದಾಸ ಗುನಗಿ, ಕೋಶಾಧ್ಯಕ್ಷ ಸಂದೀಪ ನಾಯಕ ಹಾಗೂ ಅನೇಕ ರೋಟರಿ ಸದಸ್ಯರು ಉಪಸ್ಥಿತರಿದ್ದರು. ವಿನಾಯಕ ಹೆಗಡೆಯವರನ್ನು ರೋಟರಿ ಪರವಾಗಿ ಹಾಗೂ ಶಾಲೆಯ ಪರವಾಗಿ ಅಭಿನಂದಿಸಲಾಯಿತು.