ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಮುಖ್ಯ ರಸ್ತೆ ಮರ್ಲಮನೆ ಬಸ್ ನಿಲ್ದಾಣದ ಹತ್ತಿರ ಸಿಡಿ ಕುಸಿದಿದೆ. ಕಳೆದ ಬೇಸಿಗೆಯಲ್ಲಿ ಈ ರಸ್ತೆ, ಸಿಡಿ ನಿರ್ಮಾಣ ಮಾಡಲಾಗಿದ್ದು,ಈಗಾಗಲೇ ರಸ್ತೆ ಪಕ್ಕ ಅನೇಕ ಕಡೆ ಮಣ್ಣು ಕುಸಿತವಾಗಿದೆ. ಈಗ ಸಿಡಿ ಕುಸಿತದಿಂದ ರಸ್ತೆ ಕುಸಿಯುವ ಸಾಧ್ಯತೆ ಇದ್ದು ಸಂಚಾರಕ್ಕೆ ಅಡಚಣೆ ಆಗಲಿದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.