ಶಿರಸಿ: ತಾಲೂಕಿನ ಯಡಳ್ಳಿಯ ಸುಕಮ೯ ಜ್ಯೋತಿಷ್ಯ ಹಾಗೂ ಯಾಗ ಶಾಲೆಯಲ್ಲಿ ಪ್ರತಿ ತಿಂಗಳು ಜ್ಞಾನ ಯಜ್ಞ ನಡೆಸುವ ಉದ್ದೇಶದಿಂದ ಅರಿವು ಎಂಬ ಹೆಸರಿನ ಪ್ರಥಮ ಕಾಯ೯ಕ್ರಮ ನಡೆಯಿತು. ಈ ಮೂಲಕ ಅರಿವಿನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪ್ರಸಿದ್ಧ ವೈದ್ಯ ಡಾ. ವಿನಾಯಕ ಹೆಬ್ಬಾರ್ , ಮಳೆಗಾಲದಲ್ಲಿ ನಮ್ಮ ಆರೋಗ್ಯ. ಆಹಾರ ಪ್ರಕೃತಿ ದತ್ತವಾಗಿ ಸಿಗುವ ಆಹಾರದಿಂದ ಆಗುವ ಪ್ರಯೋಜನ, ಯಾವ ಆಹಾರ ನಿಷಿದ್ಧ ಹಾಗೂ ಯಾವ ಆಹಾರದ ಸೇವನೆಯಿಂದ ರೋಗ ಮುಕ್ತರಾಗಬಹುದು ಎಂಬ ಮಾಹಿತಿಯನ್ನು ಸವಿಸ್ತಾರವಾಗಿ ವಿಷಯ ತಿಳಸಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಕೃಷಿಕ ಅನಂತ ಹೆಗಡೆ ಬಳಗಂಡಿವಹಿಸಿದ್ದರು. ಆರಂಭದಲ್ಲಿ ಸುಕಮ೯ ಯಾಗ ಶಾಲೆಯ ಮುಖ್ಯಸ್ಥ ವಿ. ಡಿ. ಭಟ್ಟ ಕರಸುಳ್ಳಿ ಸ್ವಾಗತಿಸಿ ಪರಿಚಯಿಸಿದರು. ಜನಾಧ೯ನ ಆಚಾಯ೯ ಯಡಳ್ಳಿ ಪ್ರಸಾವನೆ ಮಾಡಿ ನಿವ೯ಹಣೆ ಮಾಡಿದರು. ಆದಿತ್ಯ ಹೆಗಡೆ ಯಡಳ್ಳಿ ವಂದಿಸಿದರು.