ಶಿರಸಿ: ತಾಲೂಕಿನ ಶ್ರೀ ಗಜಾನನ ಪ್ರೌಢ ಶಾಲೆ, ಹೆಗಡೆಕಟ್ಟಾದಲ್ಲಿ ಲಯನ್ಸ ಅಂತರಾಷ್ಟ್ರೀಯ ಸಂಸ್ಥೆಯ ಲಯನ್ಸ ಕ್ವೆಸ್ಟ್ ತರಗತಿಗಳನ್ನು ಲಯನ್ಸ್ ಕ್ಲಬ್ ಶಿರಸಿಯ ಪದಾಧಿಕಾರಿಗಳಿಂದ ಆರಂಭಿಸಲಾಯಿತು. ಅಧ್ಯಕ್ಷರಾದ ಲ. ಅಶೋಕ ಹೆಗಡೆ ಶಾಲಾ ಮಕ್ಕಳಿಗೆ ಕ್ವೆಸ್ಟ ವಿಷಯದ ಬಗ್ಗೆ ಮಾತನಾಡಿ, ಒಳ್ಳೆಯ ನಾಗರಿಕರಾಗಲು ಲಯನ್ಸ ಕ್ವೆಸ್ಟ ಸಹಕಾರಿಯಾಗಿದ್ದು ಇದರ ಪ್ರಯೋಜನ ಪಡೆಯಲು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಹೆಗಡೆ ಮಕ್ಕಳಿಗೆ ತಿಳುವಳಿಕೆ ನೀಡಿ, ಲಯನ್ಸ ಕ್ಲಬ್ ಶಿರಸಿಗೆ ಧನ್ಯವಾದ ತಿಳಿಸಿದರು. ಶಾಲೆಯ ಮುಖ್ಯಾಧ್ಯಾಪಕ ಶೈಲೆಂದ್ರ H.M. ಮಕ್ಕಳಿಗೆ ಲಯನ್ಸ ಕ್ವೆಸ್ಟ ತರಬೇತಿಯ ಪ್ರಯೋಜನ ಪಡೆಯಲು ತಿಳಿಸಿದರು. ಲಯನ್ ಪ್ರತಿಭಾ ಹೆಗಡೆ, ಲಯನ್ M.I. ಹೆಗಡೆ ಮಕ್ಕಳಿಗೆ ಶುಭ ಹಾರೈಸಿದರು. ಲಯನ್ಸ ಕ್ಲಬ್ ಕಾರ್ಯದರ್ಶಿ ಲ. ಜ್ಯೋತಿ ಅಶ್ವತ್ಥ ಹೆಗಡೆ, ಖಜಾಂಚಿ ಲ. ಶರಾವತಿ ಭಟ್, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.