ಮುಂಡಗೋಡು: ತಾಲೂಕಿನ ಚಿಪಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಜು.5 ಬುಧವಾರದಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ವೇಳೆ ಹಲವಾರು ಜಾತಿಯ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶಾಲಾ ಮಕ್ಕಳು ಸ್ವತಃ ತಾವೇ ಗಿಡನೆಟ್ಟು ಸಂತಸಪಟ್ಟು, ಪರಿಸರವನ್ನು ಉಳಿಸಿ, ಬೆಳೆಸುತ್ತೇವೆ. ಪ್ರತಿವರ್ಷ ಗಿಡ ನೆಡುವುದರ ಮೂಲಕ ಅರಣ್ಯವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಂಡರು.
ಕಾರ್ಯಕ್ರಮದಲ್ಲಿ ಚಿಪಗೇರಿ ಉಪವಲಯದ ಅರಣ್ಯಾಧಿಕಾರಿ ಮಲ್ಲಪ್ಪ ಮೇಟಿ, ಅರಣ್ಯ ಪಾಲಕ ಹರೀಶ ನಾಯ್ಕ್, ಲಕ್ಷ್ಮಣ್ ಉಗ್ಗನವರ್, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು,SDMC ಸದಸ್ಯರು, ಊರ ನಾಗರಿಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.