ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ 2023-24ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿಗಳ ಆಯ್ಕೆಗೆ ಚುನಾವಣೆ ನಡೆಯಿತು. ವಿವಿಧ ಸ್ಥಾನಗಳಿಗೆ ಹತ್ತನೇ ವರ್ಗದ ಒಟ್ಟೂ 21ವಿದ್ಯಾರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು.
ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಶಾಲೆಯ ವಿದ್ಯಾರ್ಥಿಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಚೈತನ್ಯ ಗಣಪತಿ ಹೆಗಡೆ ಹೊಸ್ಮನೆ, ವಿದ್ಯಾರ್ಥಿನಿಯರ ವಿಭಾಗಕ್ಕೆ ತೃಪ್ತಿ ರಾಮಚಂದ್ರ ಗೌಡ ಮಳಲಿ, ಕ್ರೀಡಾ ಕಾರ್ಯದರ್ಶಿ ವಿಭಾಗಕ್ಕೆ ರವಿತೇಜ ಮಡಿವಾಳ ನೆಗ್ಗು, ಧನ್ಯಾ ಗಣಪತಿ ನಾಯ್ಕ ಹನುಮಂತಿ, ಸಾಂಸ್ಕೃತಿಕ ವಿಭಾಗಕ್ಕೆ ಭಾರ್ಗವ ದಿನೇಶ್ ಪಾವಸ್ಕರ ಕೊಳಗೀಬಿಸ್,ಸುಚೇತಾ ಪ್ರಶಾಂತ ಹೆಗಡೆ ಹೊಸ್ಮನೆ, ಆರೋಗ್ಯ ಮತ್ತು ಸ್ವಚ್ಚತೆ ವಿಭಾಗಕ್ಕೆ ಮಹೇಶ ಬಂಗಾರ್ಯ ಗೌಡ ಕೆರೆಹನುಮಂತಿ, ದಾಯಿಹಲಿಮಾ ಆಝಾದ್ ಶೇಖ್ ಹನುಮಂತಿ ಇವರುಗಳು ಕ್ರಮವಾಗಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಿಭಾಗದಿಂದ ಆಯ್ಕೆಯಾದರು.
ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ನಡೆದ ಈ ಚುನಾವಣೆ ಪ್ರಕ್ರಿಯೆಯಲ್ಲಿ ಮೊಬೈಲ್ ಬಳಸಿ ಸಾಮಾಜಿಕ ಕಳಕಳಿಯ ಪೇಪರ್ ಲೇಸ್ (ಕಾಗದ ರಹಿತ) ಚುನಾವಣೆ ಪ್ರಕ್ರಿಯೆ ಉದ್ದೇಶವನ್ನು ಸಾರ್ಥಕಗೊಳಿಸಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಚುನಾವಣೆ ಪ್ರಕ್ರಿಯೆ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿ ಭವಿಷ್ಯದ ಜವಾಬ್ದಾರಿಯುತ ಮತದಾರನಾಗಿ ರೂಪಿಸುವಲ್ಲಿ ಮಹತ್ತರ ಮಾದರಿಯಾಯಿತು.
ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ದೈಮನೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಜಿ. ಹೆಗಡೆ ಇವರ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಎಲ್ಲ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ಸಿಗೆ ಸಹಕರಿಸಿದರು