ನವದೆಹಲಿ: ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದ ನೀರಜ್ ಚೋಪ್ರಾ 87.66 ಮೀಟರ್ ಎಸೆದು ಡೈಮಂಡ್ ಲೀಗ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದು ಸತತ ಎರಡನೇ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇಂಜುರಿಯಿಂದಾಗಿ ನೀರಜ್ ಚೋಪ್ರಾ ಒಂದು ತಿಂಗಳು ವಿಶ್ರಾಂತಿಯಲ್ಲಿದ್ದರು. ಇದೀಗ ನೀರಜ್ ಕಂಬ್ಯಾಕ್ ಮಾಡಿದ್ದು. ಮೊದಲನೇ ಸುತ್ತಿನಲ್ಲಿ ನೀರಜ್ ಫೌಲ್ ಮಾಡಿದ್ದರು. ತದನಂತರ ಐದನೇ ಸುತ್ತಿನಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದಿದ್ದು, ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.
ಪ್ರಶಸ್ತಿ ಗೆದ್ದ ನೀರಜ್‌ಗೆ ಇದು ಎಂಟನೇ ಅಂತಾರಾಷ್ಟ್ರೀಯ ಚಿನ್ನದ ಪದಕವಾಗಿದೆ. ಜರ್ಮನಿಯ ಜೂಲಿಯನ್ ವೆಬರ್ ಎರಡನೇ ಸ್ಥಾನ ಹಾಗೂ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜೆ ಮೂರನೇ ಸ್ಥಾನ ಪಡೆದಿದ್ದಾರೆ