ಕುಮಟಾ: ಕಳೆದ 108 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಸೇವೆಯಲ್ಲಿರುವ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ ಉಡುಪಿ ಇದರ 15ನೇ ಶಾಖೆಯಾದ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ ಸ್ಥಳೀಯ ಶಾಖೆಯು ಶ್ರೀಗಜಾನನ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಬ್ಯಾಂಕಿನ ಎಟಿಎಂ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಆಗಮಿಸಿದ ಸರ್ವರನ್ನು ಶಾಖಾಧಿಕಾರಿ ರಾಘವೇಂದ್ರ ಕೆ.ಎ. ಸ್ವಾಗತಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಡಿ.ನಾಯ್ಕ್, ಬಾಳಿಗಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ವೀಣಾ ಕಾಮತ್, ಸರ್ಕಾರಿ ಬೆಣ್ಣೆ ಪಿಯು ಕಾಲೇಜಿನ ಉಪನ್ಯಾಸಕ ಆನಂದ್ ನಾಯಕ್, ಪ್ರಾಥಮಿಕ ಶಿಕ್ಷಕರ ಸಂಘದ ಸದಸ್ಯ ಕಿರಣ್ ನಾಯ್ಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಎಸ್.ವಿ.ನಾಯ್ಕ್, ಶಿಕ್ಷಕ ಎಂ.ಆರ್.ಮುಕ್ರಿ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕಿನ ಎಟಿಎಂ ಕಾರ್ಡನ್ನು ಶಿಕ್ಷಕ ಸದಸ್ಯರುಗಳಿಗೆ ವಿತರಿಸಲಾಯಿತು. ಶಿಕ್ಷಕ ಸದಸ್ಯರುಗಳು ಮಾತನಾಡಿ, ಬ್ಯಾಂಕಿನ ನಿರಂತರ ಸೇವೆಯ ಕುರಿತು ಸಂತೋಷ ವ್ಯಕ್ತಪಡಿಸಿದರು. ಬ್ಯಾಂಕಿನ ಉತ್ತರೋತ್ತರ ಅಭಿವೃದ್ಧಿಗೆ ಶುಭ ಹಾರೈಸಿದರು.
ಶಿಕ್ಷಕ ಸದಸ್ಯರುಗಳಾದ ಮಂಗಳ ಕೆಯು, ಪ್ರಕಾಶ್ ಲೋಪೀಸ್, ಮಂಜುನಾಥ್ ಮುಕ್ರಿ, ನಾಗು ಮುಕ್ರಿ, ಗೋಪಿ ಭಜಂತ್ರಿ ಮೊದಲಾದ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು. ಶಾಖೆಯ ಸಿಬ್ಬಂದಿಗಳಾದ ಹರ್ಷ ಭಟ್ ನಿರೂಪಿಸಿದರು. ಸಹನಾ ಕೆಪಿ ವಂದಿಸಿದರು. ಅಭಯ್ ನಾಯಕ್, ನಯನ ಪಟಗಾರ, ನಿತ್ಯಾನಂದ ಹೋಬಳಿದಾರ ಸಹಕರಿಸಿದರು.