ಯಲ್ಲಾಪುರ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸರ್ವೇ ವಿಭಾಗದ ಜನರಲ್ ಮ್ಯಾನೇಜರ್ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸರ್ವೆ ಕಾರ್ಯ ನಡೆಯುತ್ತಿದೆ.
ಶಾಸಕ ಶಿವರಾಮ ಹೆಬ್ಬಾರ್ ಅವರು ಡೋಮಗೇರಿ ಕ್ರಾಸ್ ಬಳಿ ಕಿಶೋರ್ ಕುಮಾರ್ ಅವರ ನೇತೃತ್ವದ ತಂಡವನ್ನು ಭೇಟಿಯಾಗಿ ಸನ್ಮಾನಿಸಿದರು. ಅಲ್ಲದೇ ಈ ರೈಲ್ವೆ ಯೋಜನೆಯ ಅನೂಕುಲಗಳನ್ನು ವಿವರಿಸಿ, ಆನೆ ಕಾರಿಡಾರ್ ನಿರ್ಮಾಣದ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ರೈಲ್ವೆ ಸರ್ವೆ ತಂಡದೊಂದಿಗೆ ಹೆಬ್ಬಾರ್ ಚರ್ಚೆ
