ಕುಮಟಾ: ಸೃಷ್ಟಿ ಸಂಸ್ಥೆಯ ವತಿಯಿಂದ ತಾಲೂಕಿನ ಬರ್ಗಿ ಗ್ರಾಮ ಪಂಚಾಯತಿಯ ಬೆಟ್ಕುಳಿ ಗ್ರಾಮದಲ್ಲಿನ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆಯನ್ನು ಮಾಡಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಕುಳಿ ಹಾಗೂ ಜನತಾ ಕಾಲೋನಿ ಬೆಟ್ಕುಳಿ ಈ ಎರಡು ಶಾಲೆಯ ಎಲ್ಲಾ ಮಕ್ಕಳಿಗೂ ನೋಟಬುಕ್, ಪೆನ್ನು ಹಾಗೂ ಪೆನ್ಸಿಲ್ಗಳನ್ನು ವಿತರಿಸಲಾಯಿತು. ಸಂಸ್ಥೆಯ ಪರವಾಗಿ ನಿವೃತ್ತ ಶಿಕ್ಷಕ ಎಲ್.ಯು.ಪಟಗಾರ ಅವರು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
ನೋಟ್ಬುಕ್ ವಿತರಣಾ ಸಂದರ್ಭದಲ್ಲಿ ಬೆಟ್ಕುಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಪಟಗಾರ, ಸಹಶಿಕ್ಷಕ ಶಂಕರ ಪಟಗಾರ, ನಾಗವೇಣಿ ನಾಯಕ ರೋಹಿಣಿ ಕಿಣಿ, ಜನತಾ ಕಾಲೋನಿ ಶಾಲೆಯಯಲ್ಲಿ ಶಿಕ್ಷಕರಾದ ಐ.ಜಿ.ನಾಯ್ಕ ಹಾಗೂ ಅನಿತಾ ನಾಯ್ಕ ಉಪಸ್ಥಿತರಿದ್ದು ಸಹಕರಿಸಿದರು.