Slide
Slide
Slide
previous arrow
next arrow

ಗ್ಯಾರಂಟಿ ಅನುಷ್ಠಾನಗೊಳಿಸದೆ ಮೋಸ ಮಾಡಿದರೆ ಹೋರಾಟ: ಎಮ್.ಜಿ.ಭಟ್

300x250 AD

ಹೊನ್ನಾವರ: ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಎಲ್ಲರಿಗೂ ನೀಡದೆ ಮೋಸ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಮ್.ಜಿ.ಭಟ್ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಹಿಡಿಯಲೇಬೇಕೆಂಬ ಅಭಿಲಾಷೆಯಿಂದ ಜನತೆಗೆ 5 ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಅನ್ವಯ ಆಗುವಂತೆ ಘೋಷಣೆ ಮಾಡಿತ್ತು. ಆದರೆ ಅಧಿಕಾರ ಬಂದ ಮೇಲೆ ತನ್ನ ಆಶ್ವಾಸನೆಯಿಂದ ಉಲ್ಟಾ ಹೊಡೆದಿದ್ದು, ಕೆಲವು ನಿಯಮಾವಳಿ ಹಾಕಲು ಮುಂದಾಗುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಮೋಸವಾಗಿದೆ. ಘೋಷಣೆ ಮಾಡುವಾಗ ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲರಿಗೂ ವಿದ್ಯುತ್ ಉಚಿತ, ನನಗೂ ಉಚಿತ ನಿಮಗೂ ಉಚಿತ, ಪ್ರತಿಯೊಬ್ಬರಿಗೂ ಉಚಿತ ಎನ್ನುವ ಆಶ್ವಾಸನೆಯಿಂದ ರಾಜ್ಯದ ಜನರು ನಂಬಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯನವರು ತನ್ನ ಮಾತಿನಿಂದ ಉಲ್ಟಾ ಹೊಡೆದಿದ್ದು, ಅನೇಕ ನಿಬಂಧನೆಗಳನ್ನು ಹಾಕಿಕೊಡುವ ವಿಚಾರ ಮಾಡುತ್ತಿದ್ದಾರೆ.
ಎಲ್ಲಾ ಮಹಿಳೆಯರಿಗೂ ಕರ್ನಾಟಕದ ಯಾವುದೇ ಮೂಲೆಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಎನ್ನುವ ಗ್ಯಾರಂಟಿ ಯೋಜನೆಯಾದ ಡಿಕೆಶಿಯವರ ಮಾತು ಕೂಡ ತಪ್ಪುವ ಸಾಧ್ಯತೆ ಇದೆ. ರಾಜ್ಯದ ಜನರು ಪೆದ್ದರು ಎಂದು ತಿಳಿದಂತಿದೆ. ಚುನಾವಣೆ ಸಮಯದಲ್ಲಿ ಘೋಷಣೆ ಮಾಡಬೇಕಾದರೆ ಕರ್ನಾಟಕದ ಪ್ರತಿಯೊಬ್ಬರಿಗೂ ಉಚಿತ ಎಂದು ಘೋಷಣೆ ಮಾಡಿ ಈಗ ಇಲ್ಲಸಲ್ಲದ ನಿಯಮವನ್ನು ಹಾಕಿದರೆ ರಾಜ್ಯದ ಜನರು ಸರ್ಕಾರದ ವಿರುದ್ಧ ದಂಗೆ ಏಳುವ ಸಾಧ್ಯತೆಗಳಿವೆ. ಜನರಿಗೆ ಮರಳು ಮಾಡುವ ಘೋಷಣೆಗಳನ್ನ ಮಾಡಿ ಈಗ ಆ ಘೋಷಣೆಗಳನ್ನು ಅನುಷ್ಠಾನಗೊಳಿಸಲು ಬೇರೆ ಬೇರೆ ರೀತಿಯ ನಿಯಮವನ್ನು ಹಾಕಿದರೆ, ಜನರಿಗೆ ನಿರಾಸೆ ಮೂಡುವಂತೆ ಮಾಡುತ್ತಿರುವುದಲ್ಲದೇ ರಾಜ್ಯದ ಜನತೆಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದರು.
ಈಗಾಗಲೇ ಘೋಷಣೆ ಮಾಡಿದ ಎಲ್ಲಾ ಗ್ಯಾರೆಂಟಿಗಳನ್ನು ಯಾವುದೇ ನಿಯಮವಾಳಿ ಹಾಕದೆ ಪ್ರತಿಯೋರ್ವ ಫಲಾನುಭವಿಗೂ ತಲುಪುವಂತೆ ಸರ್ಕಾರ ಆದೇಶ ಮಾಡಬೇಕಾಗಿದೆ. ಅದಲ್ಲದೆ ತನ್ನ ಮೂಗಿನ ನೇರಕ್ಕೆ ವಿಚಾರ ಮಾಡುವುದಾದರೆ ರಾಜ್ಯದ ಜನರು ದಡ್ಡರಲ್ಲ, ಸರಿಯಾದ ಸಮಯದಲ್ಲಿ ಸರಿಯಾದ ಹೋರಾಟವನ್ನು ಮಾಡುತ್ತಾರೆ. ಜನತೆಯ ಧ್ವನಿಯಾಗಿ ಜನಪರ ವೇದಿಕೆಯೂ ಹೋರಾಟಕ್ಕೆ ಬೆಂಬಲ ಸೂಚಿಸಲಿದೆ ಎಂದರು.

300x250 AD
Share This
300x250 AD
300x250 AD
300x250 AD
Back to top