Slide
Slide
Slide
previous arrow
next arrow

ಸಮರ್ಥ ಕರ್ತವ್ಯ ನಿರ್ವಹಣೆಗೆ ಉತ್ತಮ ಆರೋಗ್ಯ ಹೊಂದುವುದು ಮುಖ್ಯ: ಆರ್.ಕೆ.ಸಿಂಗ್

300x250 AD

ಯಲ್ಲಾಪುರ: ಉತ್ತಮವಾದ ಆರೋಗ್ಯ ಹೊಂದಿದಾಗ ಮಾತ್ರ ಇಲಾಖೆಯಲ್ಲಿ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ. ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಸಂಘಟಿತರಾಗಿ ಕೆಲಸ ಮಾಡಬೇಕು. ನನಗೆ ಅರಣ್ಯ ಮೊದಲ ಆದ್ಯತೆ, ನಂತರ ನಮ್ಮ ಅಧಿಕಾರಿಗಳು, ಸಿಬ್ಬಂದಿಗಳಾಗಿದ್ದರು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥ ಆರ್.ಕೆ.ಸಿಂಗ್ ಹೇಳಿದರು.
ಅವರು ಯಲ್ಲಾಪುರದ ಅರಣ್ಯ ಸಭಾಭವನದಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ, ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ನಾವು ನಮ್ಮ ಪ್ರಕೃತಿಯನ್ನು ಕಾಪಾಡುತ್ತಲೇ ಬಹಳಷ್ಟು ಕಲಿಯುತ್ತೇವೆ. ಕಲಿಯುವುದು ಇನ್ನು ಬಹಳಷ್ಟಿದೆ. ನನ್ನ ನಿವೃತ್ತಿಗೆ ಇಲ್ಲಿ ಕರೆದು ಸನ್ಮಾನಿಸಿ ಗೌರವಿಸಿದ್ದಿರಿ, ನಿಮ್ಮ ಪ್ರೀತಿ ವಿಶ್ವಾಸ, ಗೌರವಕ್ಕೆ ನಾನು ಚಿರಋಣಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ವಸಂತರೆಡ್ಡಿ ಮಾತನಾಡಿ, ಆರ್.ಕೆ.ಸಿಂಗ್ ಅವರು ಅರಣ್ಯ ಇಲಾಖೆಯಲ್ಲಿ ಬಹಳಷ್ಟು ಕಠಿಣ ನಿರ್ಧಾರ ತೆಗೆದುಕೊಂಡ ನೇರ, ದಿಟ್ಟ ಮತ್ತು ವಿರಳ ಅಧಿಕಾರಿಯಾಗಿದ್ದಾರೆ. ಕಳೆದ 32 ವಷÀðದ ಅರಣ್ಯ ಇಲಾಖೆಯ ಸೇವೆಯಲ್ಲಿ ಎಂದಿಗೂ ಕೂಡ ತಮ್ಮ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡವರಲ್ಲ. ಅವರ ಮಾರ್ಗದರ್ಶನ ಹಾಗೂ ಕಾಳಜಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾವು ಬಹಳಷ್ಟು ಕೆಲಸ ಮಾಡಿದ್ದೇವೆ. ಅರಣ್ಯ ಇಲಾಖೆಯ ಮಹತ್ವದ ಕಾರ್ಯಕ್ರಮವಾದ ಬೀಜ ಬಿತ್ತನೆ ಕಾರ್ಯಕ್ರಮ ಬಗ್ಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಆರ್.ಕೆ.ಸಿಂಗ್ ಅವಧಿಯಲ್ಲಿ ಅರಣ್ಯ ಇಲಾಖೆಗೆ ಒಂದು ಲೋಗೋ ಕೂಡ ಬಂದಿದೆ. ಜಿಲ್ಲೆಯ ಎಲ್ಲ ವಿಭಾಗಗಳಲ್ಲಿ ಡಿನೋಟಿಫಿಕೇಷನ್ ಮಾಡಲಾಗುತ್ತಿದೆ. ಅವರ ಸರಳತೆ ನಮಗೆ ಮಾದರಿಯಾಗಿದೆ. ಅವರ ನೇತೃತ್ವದಲ್ಲಿ ಕೆಲಸ ಮಾಡಲು ನಾವೆಲ್ಲರು ಖುಷಿ ಪಡುತ್ತಿದ್ದೆವು. ಅವರ ನಿವೃತ್ತಿ ಜೀವನ ಖುಷಿಯಾಗಿರಲಿ ಎಂದು ಹಾರೈಸಿದರು.
ಶಿರಸಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ.ಆರ್., ಕಾರವಾರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತಕುಮಾರ ಕೆ.ಸಿ., ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ, ಶಿರಸಿ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜೀಜ ಶೇಖ್, ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಎಸಿಎಫ್ ಕೆ.ಟಿ.ಬೋರಯ್ಯ, ಅಂಕೋಲಾ ಆರ್‌ಎಫ್‌ಓ ಜಿ.ವಿ.ನಾಯಕ, ಡಿವೈಅರ್‌ಎಫ್‌ಓ ಗುರುಪ್ರಸಾದ, ಗಸ್ತು ಅರಣ್ಯ ಪಾಲಕ ಶಹನವಾಜ್ ಬಿ.ಆರ್. ಆರ್.ಕೆ.ಸಿಂಗ್ ಕುರಿತು ಮಾತನಾಡಿದರು.
ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕಗೈದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಎಚ್.ಎ. ವಂದಿಸಿದರು. ಡಿಆರ್‌ಎಫ್‌ಒಗಳಾದ ಸುನಿತಾ ಬಿ.ಎಂ. ಹಾಗೂ ಶ್ರೀಶೈಲ್ ಐನಾಪುರ ನಿರೂಪಿಸಿದರು. ಗಸ್ತು ಅರಣ್ಯ ಪಾಲಕ ಶಹನವಾಜ್ ಮುಲ್ತಾನಿ ಪ್ರಾರ್ಥಿಸಿದರು.

300x250 AD
Share This
300x250 AD
300x250 AD
300x250 AD
Back to top