ಸಿದ್ದಾಪುರ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ.ರಶ್ಮಿ ಎನ್.ಕರ್ಕಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವೀರೇಶ ಮಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೇಂಜರ್ಸ್ ಲೀಡರ್ಸ ಮೀನಾ ಆರ್.ಎಸ್. ಶಿಬಿರದ ವರದಿ ವಾಚನ ಮಾಡಿದರು. ರೋವರ್ಸ್ ಲೀಡರ್ಸ್ ಹಾಗೂ ಐ.ಕ್ಯೂ.ಎ.ಸಿ. ಸಂಚಾಲಕ ಜೆ.ಎಸ್.ಶಾಸ್ತ್ರಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಸದರಿ ಬೇಸಿಗೆ ಶಿಬಿರದಲ್ಲಿ ಒಟ್ಟು 24 ರೇಂಜರ್ಸ್ ಭಾಗವಹಿಸಿದ್ದು, ಒಟ್ಟು 4 ದಿನಗಳ ಕಾಲ ಈ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು. ಮೊದಲನೇ ದಿನ ರೇಂಜರ‍್ಸ್ ವಿಥ್ ನೇಚರ್ ಶೀರ್ಷಿಕೆಯಡಿಯಲ್ಲಿ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಎರಡನೆಯ ದಿನ ‘ಆರೋಗ್ಯವೇ ಭಾಗ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೂರನೇಯ ದಿನ ‘ಕಸದಿಂದ ರಸ ‘ಶೀರ್ಷಿಕೆಯಡಿಯಲ್ಲಿ ಹಳೆಯ ದಿನಪತ್ರಿಕೆಗಳನ್ನು ಬಳಸಿ ಗೃಹ ಅಲಂಕಾರಿಕ ವಸ್ತುಗಳನ್ನು ರೇಂಜರ‍್ಸ್ ತಯಾರಿಸಿದರು. ನಾಲ್ಕನೇ ದಿನ ‘ನೇಚರ್ ವಾಕ್’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕೃತಿ ಆಧ್ಯಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಒಟ್ಟು 24 ರೇಂಜರ‍್ಸ್ 5 ತಂಡಗಳಲ್ಲಿ ಎಲ್ಲಾ ಚಟುವಟಿಕೆಗಳಲ್ಲೂ ಅತ್ಯುತ್ಸಾಹದಿಂದ ಪಾಲ್ಗೊಂಡರು. ಈ ಶಿಬಿರಕ್ಕೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡ ಎಲ್ಲಾ ರೆಂಜರ‍್ಸ್ಗಳಿಗೂ ಪ್ರೋತ್ಸಾಹ ನೀಡಿದರು.