ಕುಮಟಾ: ಕಠಿಣ ಪರಿಶ್ರಮದ ಮೂಲಕ ಕುಮಟಾ ಮೂಲದ ನಿಧಿ ಪೈ ಅವರು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 110ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ತಾಲೂಕಿನ ಹೆಗಡೆಯ ನಾರಾಯಣ ವಾಸುದೇವ ಪೈ (ಪಟೇಲರ ಮನೆ) ಹಾಗೂ ಶ್ರದ್ಧಾ ಪೈ ಅವರ ಪುತ್ರಿಯಾದ ನಿಧಿ ಪೈ ಅವರು, ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ತನ್ನ ಕಠಿಣ ಪರಿಶ್ರಮದಿಂದಲೇ ಈ ಸಾಧನೆಯನ್ನು ಮಾಡಿದ್ದಾರೆ. ಮೂರನೇ ಬಾರಿಗೆ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾಳೆ. ಸದ್ಯ ಹೈದ್ರಾಬಾದ್ನಲ್ಲಿ ನೆಲೆಸಿರುವ ನಿಧಿ ಅವರು ಹುಟ್ಟೂರಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದು, ಎಲ್ಲೆಡೆಯಿಂದಲೂ ಅಭಿನಂದನೆಯ ಮಹಾಪುರ ಹರಿದುಬರುವಂತಾಗಿದೆ.
ಕೇ0ದ್ರ ಲೋಕಸೇವಾ ಆಯೋಗವು ನಡೆಸುವ ಭಾರತ ಆಡಳಿತ ಸೇವಾ (ಐಎಎಸ್) ಪರೀಕ್ಷೆಯಲ್ಲಿ ನಿಧಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. 2020ರಲ್ಲಿ ಬಿಕಾಂ ಪದವಿ ಮುಗಿಸಿದ ಇವರು ಯು.ಪಿ.ಎಸ್.ಸಿ ಪರೀಕ್ಷೆ ಬಗ್ಗೆ ಪೂರ್ವ ತಯಾರಿ ಆರಂಭಿಸಿದ ನಿಧಿ ಅವರು ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿಯನ್ನು ಹೊಂದಿದ್ದರು. ತಂದೆ ಖಾಸಗಿ ಸಂಸ್ಥೆಯೊoದರಲ್ಲಿ ಕೆಲಸ ನಿರ್ವಹಿಸಿ ಇದೀಗ ನಿವೃತ್ತರಾಗಿದ್ದು, ಹೈದರಾಬ್ನದಲ್ಲಿ ನೆಲೆಸಿದ್ದಾರೆ.