Slide
Slide
Slide
previous arrow
next arrow

ವರ್ಷದಿಂದ ಪತಿ ನಾಪತ್ತೆ; ಪತ್ನಿಯಿಂದ ಅಳಲು

300x250 AD

ಕಾರವಾರ: ವರ್ಷದಿಂದ ನಾಪತ್ತೆಯಾಗಿರುವ ಗಂಡನನ್ನ ಹುಡುಕಿಕೊಡುವಂತೆ ಪತ್ನಿಯೋರ್ವರು ಜಿಲ್ಲಾಡಳಿತದ ಮೊರೆ ಹೋಗಿದ್ದು, ಜಿಲ್ಲಾಧಿಕಾರಿ ಮುಂದೆ ಎರಡು ಮಕ್ಕಳ ತಾಯಿ ಕಣ್ಣೀರು ಹಾಕಿ ಪರಿಪರಿಯಾಗಿ ಕಣ್ಣೀರು ಹಾಕಿದ್ದಾರೆ.

ತಾಲೂಕಿನ ಹಾರವಾಡ ಮೂಲದ ಮನೋಜ್ ಪೆಡ್ನೇಕರ್ (33) ನಾಪತ್ತೆಯಾದ ವ್ಯಕ್ತಿ. ಈತ ನೌಕಾನೆಲೆಯಲ್ಲಿ ಖಾಯಂ ನೌಕರನಾಗಿ ಕಳೆದ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಬೈತಖೋಲ್ ಮೂಲದ ರೇಷ್ಮಾ ಪೆಡ್ನೇಕರ್ ಎಂಬ ಯುವತಿಯನ್ನು 7 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಅಲ್ಲದೆ ಇವರಿಬ್ಬರಿಗೂ ಇಬ್ಬರು ಹೆಣ್ಣುಮಕ್ಕಳು ಕೂಡ ಜನಿಸಿದ್ದರು. ಆದರೆ ಎರಡನೇ ಮಗು ಜನಿಸಿ ಆರು ತಿಂಗಳಾಗಿರುವ ವೇಳೆಗೆ ಪತಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.

300x250 AD

ನೌಕಾನೆಲೆಯಲ್ಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದವನು ಮರಳಿ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಹಾಗೂ ತಾಯಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2022ರ ಜುಲೈ 25ರಂದು ದೂರು ದಾಖಲಿಸಿದ್ದರು. ಪೊಲೀಸ್ ಠಾಣೆ ಹಾಗೂ ನೌಕಾನೆಲೆ ಅಧಿಕಾರಿಗಳಿಗೆ ಕಳೆದೊಂದು ವರ್ಷದಿಂದ ಅಲೆದಾಡಿ ಬೇಡಿಕೊಂಡರೂ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ದೂರು ನೀಡಿದ್ದಾರೆ.

Share This
300x250 AD
300x250 AD
300x250 AD
Back to top