ಸಿದ್ಧಾಪುರ: ಅರಣ್ಯವಾಸಿಗಳು ಅರಣ್ಯ ಭೂಮಿ ಅನುಭವಿಸುವಲ್ಲಿ ಅರಣ್ಯ ಸಿಬ್ಬಂದಿಗಳು ದೌರ್ಜನ್ಯದ ಪ್ರವೃತ್ತಿ ಮುಂದುವರೆಸಿರುವುದು ಖಂಡನಾರ್ಹ. ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಇಂತಹ ಅಪಕೃತ್ಯಕ್ಕೆ ಅವಕಾಶವಿಲ್ಲ. ಅರಣ್ಯ ಸಿಬ್ಬಂದಿಗಳು ಮನೋಪ್ರವೃತ್ತಿಯನ್ನ ಬದಲಾಯಿಸಿಕೊಳ್ಳಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಸಿದ್ಧಾಪುರ ತಾಲೂಕಿನ, ಮೆಣಸಿ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿಗಳಿoದ ಅರಣ್ಯವಾಸಿಗಳಿಗೆ ಉಂಟಾಗಿದ ದೌರ್ಜನ್ಯದ ಸ್ಥಳಗಳಿಗೆ ಭೇಟ್ಟಿಕೊಟ್ಟು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಅವರಿಗೆ ಫೋನಿನ ಮೂಲಕ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮೆಣಸಿ ಗ್ರಾಮದ ಸುಮಾರು 70ಕ್ಕೂ ಮಿಕ್ಕಿ ಅರಣ್ಯ ಅತಿಕ್ರಮಣ ಕುಟುಂಬವು ಅರ್ಜಿ ಸಲ್ಲಿಸಿ, ಸಾಗುವಳಿ ಮಾಡುತ್ತಿದ್ದು ಗ್ರಾಮ ದೇವಿ ದೇವಸ್ಥಾನಕ್ಕೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಸಮೂಹ ಉದ್ದೇಶಕ್ಕೆ ಹಕ್ಕು ಮಾನ್ಯತೆಯಾಗಿರುವ ಪ್ರದೇಶಕ್ಕೆ ಸಂಬ0ಧಿಸಿದ ರಸ್ತೆ ಒಳಗೊಂಡು ತಡೆಗೋಡೆ ನಿರ್ಮಿಸುತ್ತಿರುವ ಹಾಗೂ ಜಿಪಿಎಸ್ ಮಾನದಂಡದಡಿಯಲ್ಲಿ ಅರಣ್ಯವಾಸಿಗಳ ಹಕ್ಕಿಗೆ ವಂಚಿಸುತ್ತಿರುವ ಕಾರ್ಯ ಕಾನೂನು ಬಾಹಿರವಾಗಿದ್ದು ಅರಣ್ಯ ಸಿಬ್ಬಂದಿಗಳ ಅಮಾನವೀಯತೆ ಕ್ರಮವಾಗಿದೆ ಎಂದು ಅವರು ಹೇಳಿದರು.
ದೇವರ ಮೇಲೂ ದೌರ್ಜನ್ಯ:
ಅರಣ್ಯವಾಸಿ ಅತಿಕ್ರಮಣದಾರ ಮೇಲೆ ಇಲ್ಲಿಯವರೆಗೆ ಅರಣ್ಯ ಸಿಬ್ಬಂದಿಗಳು ದೌರ್ಜನ್ಯವೆಸಗುತ್ತಿದ್ದರು. ಆದರೆ, ಈಗ ಅನಾದಿಕಾಲದಿಂದ ಈಶ್ವರ ದೇವಾಲಯದ ಸಾರ್ವಜನಿಕ ವೈವಾಹಿಟಿನ ಕ್ಷೇತ್ರದ ಸಾಗುವಳಿಗೂ ಆತಂಕ ಉಂಟುಮಾಡುತ್ತಿರುವುದು ಖೇದಕರ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಕಾನೂನು ಕ್ರಮಕ್ಕೆ ಅಗ್ರಹ:
ಕಾನೂನು ನೀತಿ ನಿಯಮಕ್ಕೆ ವಿರುದ್ಧವಾಗಿ ಅರಣ್ಯ ಸಿಬ್ಬಂದಿಗಳು ಕ್ರಮ ಜರುಗಿಸುವ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರಕಾರಕ್ಕೆ ಒತ್ತಾಯಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಅಶೋಕ ನಾಯ್ಕ ವಕೀಲ, ಮಾರುತಿ ನಾಯ್ಕ ಹೆಬ್ಬತ್ತಿ, ಊರ ಪ್ರಮುಖರು ಎನ್.ಡಿ ನಾಯ್ಕ ಮೆಣಸಿ, ಪಾರ್ವತಿ ನಾಯ್ಕ, ಹೋರಾಟಗಾರರ ಪ್ರಮುಖರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖ0ಡ, ಕಾರ್ಲೂಯಿಸ್ ಮಾವಿನಗುಂಡಿ, ರವಿ ನಾಯ್ಕ ಹಂಜಗಿ, ಕೃಷ್ಣಮೂರ್ತಿ ನಾಯ್ಕ ಹಲಗೇರಿ, ಭಾಸ್ಕರ ನಾಯ್ಕ ಮುಗದೂರು, ವಿಜಯ ನಾಯ್ಕ ಮೆಣಸಿ ನೂರಾರು ಗ್ರಾಮಸ್ಥರು ಉಸ್ಥಿತರಿದ್ದರು.