• Slide
    Slide
    Slide
    previous arrow
    next arrow
  • ಮಕ್ಕಳನ್ನು ಗ್ರಂಥಾಲಯಕ್ಕೆ ಬರುವಂತೆ ಪ್ರೇರೇಪಿಸಲು ಸಿಇಒ ಸೂಚನೆ

    300x250 AD

    ಅಂಕೋಲಾ: ತಾಲೂಕಿನ ಅಚವೆ, ಸುಂಕಸಾಳ ಹಾಗೂ ಅಗಸೂರು ಗ್ರಾಮ ಪಂಚಾತಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಖಂಡೂ ಭೇಟಿ ನೀಡಿ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು.

    ಅಚವೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಅವರು ಗ್ರಾಮ ಪಂಚಾಯತ್ ಆವರಣದಲ್ಲಿ ನಿರ್ಮಾಣಗೊಂಡ ಸ್ವಚ್ಛ ಸಂಕೀರ್ಣ ಘಟಕದ ಕಾರ್ಯ ನಿರ್ವಹಣೆ ಕುರಿತು ಸಲಹೆ ನೀಡಿ, ಸ್ವಚ್ಛತಾ ವಾಹನ ಚಲಾಯಿಸಲು ಮಹಿಳಾ ಚಾಲಕರುಗಳನ್ನು ಪ್ರೇರೇಪಿಸಿ, ತರಬೇತಿ ನೀಡಿ ಅವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.
    ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಇಕೋ ಪಾರ್ಕ್ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನರೇಗಾದಡಿ ನಿರ್ಮಾಣಗೊಂಡ ಮಳೆ ನೀರು ಕೊಯ್ಲು ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ತಿಳಿಸಿದರು. ನಂತರ ಗ್ರಾಮ ಪಂಚಾಯತಿ ಆವರಣದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು ಪ್ರಬಂಧ, ಚಿತ್ರಕಲೆ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಸ್ತಿಗಳನ್ನು ನೀಡಿ. ಗ್ರಂಥಾಲಯ ಕೇವಲ ಬಂದು ಕುಳಿತು ಹೋಗುವ ಸ್ಥಳವಾಗಬಾರದು ಅದು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಕೇವಲ ಮಕ್ಕಳು ಮಾತ್ರವಲ್ಲದೇ ಹಿರಿಯರು, ಮಹಿಳೆಯರು ಎಲ್ಲರೂ ಬಂದು ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಲಬೇಕು ಎಂದರು.

    300x250 AD

    ನ0ತರ ಸುಂಕಸಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಹಾಗೂ ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬುಳಿಯಲ್ಲಿ ನಿರ್ಮಾಣವಾಗುತ್ತಿರುವ ಘಣ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾರ್ವಜನಿಕ ಓರ್ವ ಸ್ಥಳ ನೀಡಿರುವ ಕುರಿತಾಗಿ ಪ್ರಶಂಸೆ ವ್ಯಕ್ತ ಪಡಿಸಿದರು.
    ಅಗಸೂರು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನರೇಗಾ ಅಡಿ ನಿರ್ಮಾಣವಾದ ಬಾಸ್ಕೆಟ್‌ಬಾಲ್ ಮೈದಾನ ವೀಕ್ಷಿಸಿ ಒಂದು ಶಾಲೆಯ ಸಮಗ್ರ ಅಭಿವೃದ್ಧಿಯಾಗಲು ಆ ಶಾಲೆಯಲ್ಲಿ ಪೌಷ್ಟಿಕ ಕೈತೋಟ, ಆಟದ ಮೈದಾನ, ಶಾಲೆಯ ಸುತ್ತಲೂ ಕಾಂಪೌ0ಡ್ ನಿರ್ಮಿಸಿದರೆ ಮಕ್ಕಳು ಎಲ್ಲದರಲ್ಲೂ ಹೆಚ್ಚು ತೋಡಗಿಕೊಂಡು ಅವರ ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಇವು ಸಹಾಯವಾಗುತ್ತವೆ ಎಂದರು.
    ಈ ಸಂದರ್ಭದಲ್ಲಿ ತಾಲೂಕ ಪಂಚಾಯತನ ಕಾರ್ಯ ನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು, ಅಭಿಯಂತರರು, ಐಇಸಿ ಸಂಯೋಜಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top