Slide
Slide
Slide
previous arrow
next arrow

ಜಲಮೂಲಗಳ ಸಂರಕ್ಷಣೆಗೆ ದೇವರ ಕಾಡುಗಳು ಅಗತ್ಯವಾಗಿದೆ: ಉಮಾಪತಿ ಭಟ್

300x250 AD

ಶಿರಸಿ: ಭಾರತೀಯ ಸಂಸ್ಕೃತಿಯಲ್ಲಿ ದೇವರ ಕಾಡುಗಳು ಬಹಳ ಮಹತ್ವ ಪಡೆದಿದೆ.ನಮ್ಮ ಹಿರಿಯರ ಮುಂದಾಲೋಚನೆಯಿಂದಾಗಿ ಪ್ರಾಚೀನ ಕಾಲದಿಂದಲೂ ಉಳಿಸಿಕೊಂಡುಬಂದ ದೇವರಕಾಡುಗಳು ಸಾಂಪ್ರದಾಯಿಕವಾಗಿ ಸಂರಕ್ಷಿತ ಮೀಸಲು ಅರಣ್ಯವಾಗಿದೆ. ಇಂಥಹ ದೇವರಕಾಡುಗಳು ಜೀವವೈವಿಧ್ಯ ಮತ್ತು ಜಲ ಮೂಲಗಳ ಸಂರಕ್ಷಿತ ಪ್ರದೇಶವಾಗಿದೆ ಎಂದು ಯೂತ್ ಫಾರ್ ಸೇವಾ ಕರ್ನಾಟಕ ಪ್ರಾಂತ ಪರಿಸರ ಸಂಯೋಜಕ ಉಮಾಫತಿ ಭಟ್ಟ್ ಕೆವಿ ತಿಳಿಸಿದರು.

ಅವರು ಯುತ್ ಫಾರ್ ಸೇವಾ ಮತ್ತು ಪರ್ಯಾವರಣ ಸಂರಕ್ಷಣಾ ಗತಿವಿಧಿ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಕಲಗಾರ ಹುಲಿದೇವರ ಕಾಡಿನಲ್ಲಿರುವ ಕೆರೆ(ಕಲ್ಯಾಣಿ) ಹೂಳೆತ್ತುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪವಿತ್ರ ದೇವರಕಾಡುಗಳಲ್ಲಿ ಕಂಡು ಬರುವ ಕೊಳಗಳು, ತೊರೆಗಳು ಅಥವಾ ಬುಗ್ಗೆಗಳು ಇತರ ನೀರಿನ ಮೂಲಗಳು ಬತ್ತಿ ಹೋದಾಗಲೂ ವರ್ಷವಿಡಿ ಆ ಪ್ರದೇಶಕ್ಕೆ ನೀರಿನ ಮೂಲಗಳಾಗಿ ಕಾರ್ಯ ನಿರ್ವಹಿಸುತ್ತವೆ. ಸಕಲ ಜೀವ ವೈವಿಧ್ಯ ತಾಣವಾಗಿರುವ ಈ ಪ್ರದೇಶ ಸಾವಿರಾರು ಔಷಧಿ ಸಸ್ಯಗಳನ್ನು, ಜಲಮೂಲ ರಕ್ಷಿಸುವ ಸಸ್ಯ ಸಂಪತ್ತನ್ನು ಇಲ್ಲಿ ನಾವು ಕಾಣಬಹುದು ಎಂದು ಅವರು ಹೇಳಿದರು.
”ನಿಸರ್ಗ ನೀಡಿದ ಅಮೂಲ್ಯವಾದ ಕೊಡುಗೆಗಳಲ್ಲಿ ಜಲ ಪ್ರಮುಖವಾದದ್ದು, ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನೀರು ಮಾನವ ಸಂಕುಲಕ್ಕೆ ಅತ್ಯವಶ್ಯಕ. ಇದನ್ನು ಹಿತ ಮಿತ ಬಳಕೆ ಇಂದಿನ ಜಗತ್ತಿಕ ಅನಿವಾರ‍್ಯವಾಗಿದೆ,” ಎಂದು ಹೇಳಿದರು.

”ನೈಸರ್ಗಿಕ ಸಂಪತ್ತುಗಳನ್ನು ಸಂರಕ್ಷಣೆ ಎಲ್ಲರ ಕರ್ತವ್ಯವೂ ಹೌದು, ಜಲ ಪರಿಸರವಿಲ್ಲದೆ ಮನುಕುಲದ ಪರಿಕಲ್ಪನೆ ಇಲ್ಲ. ನಿಸರ್ಗದ ಸಂಪತ್ತುಗಳು ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದರ ನಿಟ್ಟಿನಲ್ಲಿ ಇಂದು ಜಲ ಸಂರಕ್ಷಣೆ ಅರಿವು ಬಹಳ ಮುಖ್ಯ ” ಎಂದು ಯೂತ್ ಫಾರ್ ಸೇವಾ ಸಂಚಾಲನಾ ಸಮಿತಿಯ ಸದಸ್ಯ ಡಾ. ಗಣೇಶ ಹೆಗಡೆ ಹೇಳಿದರು.

300x250 AD

ಹನಿ ಹನಿ ಕೂಡಿ ಹಳ್ಳ, ಚಿಕ್ಕ ಚಿಕ್ಕ ಕಲ್ಯಾಣಿ ಕೆರೆಗಳು, ತೊರೆಗಳು ಮುಂತಾದ ಜಲಮೂಲ ಸಂರಕ್ಷಣೆಯ ಕಾರ್ಯ ನಿರಂತರವಾಗಿ ನಡೆಯಬೇಕು. ಅಂತರ್ಜಲ ಹೆಚ್ಚಿಸುವ ಸಸ್ಯಗಳ ವೃಕ್ಷಾರೋಪಣ ಮಾಡಬೇಕು ಎಂದು ಪರಿಸರ ಸಂರಕ್ಷಣಾ ಗತಿವಿಧಿ ನಾರಿಶಕ್ತಿ ಜಿಲ್ಲಾ ಪ್ರಮುಖ ಅಂಜನಾ ಹೆಗಡೆ ತಿಳಿಸಿದರು.
ಕಲಗಾರ ಗ್ರಾಮದ ಯುವಕರಾದ ನರೇಂದ್ರ ನಾಯ್ಕ, ಧನಂಜಯ ನಾಯ್ಕ, ನಾಗರಾಜ ನಾಯ್ಕ ನಾಗರಾಜ ಗೌಡ,ನಾರಾಯಣ ಗೌಡ, ಭಾರ್ಗವ ಗೌಡ, ಮಂಜುನಾಥ ಗೌಡ,ಉಮಾಪತಿ ಗೌಡ, ಮಂಜುನಾಥ ನಾಯ್ಕ, ಭರತ ಪಟಗಾರ, ನಂದು ನಾಯ್ಕ ಯೂತ್ ಫಾರ್ ಸೇವಾ ಶಿರಸಿ ಶಾಖೆಯ ಸಂಯೋಜಕ ವಿಜೇತ ನಾಯ್ಕ , ಯೂತ್ ಫಾರ್ ಸೇವಾ 30 ಜನ ಸ್ವಯಂಸೇವಕರು, ಸಂಚಲನಾ ಸಮಿತಿಯ ನಂದೀಶ ವಿ, ದಿನೇಶ ರೇವಣಕರ ಪಾಲ್ಗೊಂಡಿದ್ದರು. ಹುಲಿದೇವರ ಮೊಕ್ತೇಸರ ಚಂದ್ರಶೇಖರ ಹೆಗಡೆ ಹೂಡ್ಲಮನೆ, ಕಾರ್ಯದರ್ಶಿ ಈಶ್ವರ ನಾಯ್ಕ ಹೊನ್ನಜ್ಜಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top