ಹಳಿಯಾಳ: ಸತತ ಮೂರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು, ಜನಸೇವೆಯಲ್ಲಿ ತೊಡಗಿರುವ ಮಾಜಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರು ಒಂದು ಬಾರಿ ಶಾಸಕರಾಗಿ ಸರ್ಕಾರ ಇಲ್ಲದೇ ಇರುವ ಸಂದರ್ಭದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಸಲ ಅವರಿಗೆ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಜನಸೇವೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಸುನೀಲ್ ಹೆಗಡೆ ಪತ್ನಿ ಸುವರ್ಣಾ ಹೆಗಡೆ ಮನವಿ ಮಾಡಿದರು.
ಪತಿ ಬಿಜೆಪಿ ಅಭ್ಯರ್ಥಿ ಸುನಿಲ್ ಹೆಗಡೆ ಪರವಾಗಿ ಅವರು ಕ್ಷೇತ್ರಾದ್ಯಂತ ತಿರುಗಾಡುತ್ತಾ ಮತಬೇಟೆಯಲ್ಲಿ ತೊಡಗಿದ್ದು, ಕ್ಷೇತ್ರದ ಹಿರಿಯ ರಾಜಕಾರಣಿ ಹಾಗೂ ಸುವರ್ಣಾ ಅವರ ಮಾವ ಮಾಜಿ ವಿಧಾನ ಪರಿಷತ್ ಸದಸ್ಯ, ಮುತ್ಸದ್ದಿ ವ್ಹಿ.ಡಿ.ಹೆಗಡೆ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹ ಅವರು ತಮ್ಮ ಪ್ರಚಾರದ ವೇಳೆ ಜನರಿಗೆ ಮನದಟ್ಟು ಮಾಡುವ ಮೂಲಕ ಪತಿಯ ಪರ ಕಾಲಿಗೆ ಚಕ್ರ ಕಟ್ಟಿಕೊಂಡoತೆ ಕ್ಷೇತ್ರಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ.
ಕಳೆದ ಚುನಾಚಣೆಗಳಲ್ಲಿ ಪತ್ನಿ ಮಾತ್ರ ಪ್ರಚಾರದಲ್ಲಿ ಕಾಣಸಿಗುತ್ತಿದ್ದರು ಆದರೇ ಈ ಬಾರಿ ಸುನೀಲ್ ಹೆಗಡೆ ಅವರ ಮಗಳಾದ ನೀರಿಕ್ಷಾ, ಮಗ ನಯನ, ಅಳಿಯ ಗೌತಮ ಹಾಗೂ ಕುಟುಂಬಸ್ಥರಾದ ಶೃತಿ, ರುತುರಾಜ, ಅನಿಲ್ ಫಡ್ನಿಸ್, ಕೋಮಲ್ ಫಡ್ನಿಸ್, ಸಂಧ್ಯಾ ಭಟ್ ಹೀಗೆ ಬಿಜೆಪಿ ಅಭ್ಯರ್ಥಿ ಸುನೀಲ್ ಅವರ ಕುಟುಂಬವೇ ಮತ ಬೇಟೆಯಲ್ಲಿ ತೊಡಗಿಕೊಂಡಿರುವುದು ವಿಶೇಷವಾಗಿದೆ.
ಪ್ರಚಾರದ ವೇಳೆ ಮಾತನಾಡಿದ ಸುವರ್ಣಾ ಹೆಗಡೆ, ಹಳಿಯಾಳ ದಾಂಡೇಲಿ ಜೋಯಿಡಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಪಕ್ಷದ ಸುನೀಲ ಹೆಗಡೆ ಅವರನ್ನು ಆಯ್ಕೆ ಮಾಡಿದರೆ ಪ್ರಮುಖವಾಗಿ ನಿರುದ್ಯೋಗ ಹಾಗೂ ಆರೋಗ್ಯ ಮತ್ತು ಶಿಕ್ಷಣ ಹೀಗೆ ಹಲವಾರು ಸಮಸ್ಯೆಗಳು ಕಂಡುಬAದಿದ್ದು, ಅದನ್ನು ಬಗೆಹರಿಸಲು ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಈ ಭಾಗದಲ್ಲಿ ಏಥಿನಾಲ್ ಉತ್ಪಾದನೇ ಕಾರ್ಖಾನೆಯನ್ನು ಪ್ರಾರಂಬಿಸಿ ರೈತರ ಉತ್ಪನ್ನಗಳಾದ ಕಬ್ಬು, ಮೆಕ್ಕೆ ಜೋಳ ಹಾಗೂ ಇತರೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಕ್ಷೇತ್ರದಲ್ಲಿರುವ ಸುಮಾರು 4000ದಷ್ಟು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿ ಕೊಡುವುದು. ಮಹಿಳೆಯರ ಸ್ವಾವಲಂಭನೆ ಬದುಕಿಗಾಗಿ ಕೆಂದ್ರ ಸರಕಾರದ ಸಹಾಯ ಸಹಕಾರದಿಂದ ಕ್ಷೇತ್ರದಲ್ಲಿ ಜವಳಿ ಉದ್ಯಮ ಸ್ಥಾಪನೆ ಮಾಡಿ ಮಹಿಳೆಯರಿಗೆ ಗಾರ್ಮೆಂಟ್ಸ್ ಕಾರ್ಖಾನೆ ಪ್ರಾರಂಭಿಸಿ ಸೂಮಾರು 3000 ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ಒದಗಿಸಿ ಅವರ ಕುಟುಂಬಕ್ಕೆ ಆರ್ಥಿಕ ಹಾಗೂ ಸ್ವಾವಲಂಭನೆ ಬದುಕು ನಡೆಸಲು ನೆರವಾಗುವುದು ಸೇರಿದೆ.
ಭಾರತೀಯ ಸೈನ್ಯಕ್ಕೆ ಸೇರುವ ಯುವಕರಿಗಾಗಿ ಸೈನಿಕ ತರಬೇತಿ ಕೇಂದ್ರವನ್ನು ನಮ್ಮ ಕ್ಷೇತ್ರದಲ್ಲಿ ಸ್ಥಾಪಿಸುವುದು. ಜೋಯಿಡಾ ತಾಲೂಕಿನ ಗಣೇಶಗುಡಿಯ (ಸೂಪಾ) ಆಣೆಕಟ್ಟು ಕಟ್ಟಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಅಲ್ಲಿಯ ಜನರ ಸಮಸ್ಯೆ ಪರಿಹಾರಕ್ಕಾಗಿ ಸುನಿಲ ಹೆಗಡೆಯವರು ಶಾಸಕರ ಅವಧಿಯಲ್ಲಿ ಪಾದಯಾತ್ರೆ ಮುಖಾಂತರ ಹಳ್ಳಿ ಹಳ್ಳಿಗೆ ಹೋಗಿ ಅಂದಿನ ಸರಕಾರದ ಗಮನಕ್ಕೆ ತಂದಿರುವ ಪರಿಣಾಮವಾಗಿ ಇಂದು ಜೋಯಿಡಾ ತಾಲೂಕು ಪ್ರವಾಸೋಧ್ಯಮ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಇನ್ನೂ ಹಲವಾರು ಸಮಸ್ಯೆಗಳು ಹಾಗೇಯೆ ಇದ್ದು ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಒದಗಿಸುವುದು ಹೀಗೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದು, ಈ ಎಲ್ಲ ಉದ್ದೇಶಗಳು ಈಡೇರಬೇಕಾದರೇ ಸುನೀಲ್ ಹೆಗಡೆ ಅವರಿಗೆ ಮತದಾನ ಮಾಡುವ ಮೂಲಕ ವಿಧಾನಸಭೆಗೆ ಕಳಿಸಿಕೊಡುವಂತೆ ಮನವಿ ಮಾಡಿದರು.