ಅಂಕೋಲಾ: ಒಂದೆಡೆ ಜಗತ್ತೇ ಮೆಚ್ಚುವ ನೇತಾರ ಪ್ರಧಾನಮಂತ್ರಿ ಮೋದಿಜಿ ಅವರು ನಮ್ಮನ್ನು ಆಶೀರ್ವದಿಸಲು ಬರುವ ಸಂತಸ. ಇನ್ನೊಂದೆಡೆ ಕ್ಷೇತ್ರದಲ್ಲಿ ಯುವ ಸಮುದಾಯ ಶಾಸಕಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಬೆನ್ನೆಲುಬಾಗಿ ಕೈಜೋಡಿಸುವ ಸುಸಂದರ್ಭ ಇನ್ನಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಪಟ್ಟಣದ ಕ್ಲಬ್ ವಿ ಪಿಟ್ನೆಸ್ ಕಚೇರಿ ಆವರಣದಲ್ಲಿ 400ಕ್ಕೂ ಅಧಿಕ ಯುವಕರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರು ಮಾತನಾಡಿದರು. ಐದು ವರ್ಷದ ಆಡಳಿತ ಅವಧಿಯಲ್ಲಿ ಕ್ಷೇತ್ರದ ಜನ ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಕೈಗೊಂಡಿದ್ದೇನೆ. ಹಲವರು ನಿರಂತರವಾಗಿ ತೊಂದರೆ ಉಂಟು ಮಾಡುತ್ತಿದ್ದರೂ ಮಹಿಳೆಯಾಗಿ ಎದೆಗುಂದದೆ ಜನರ ಪರವಾಗಿ ನಿಂತಿದ್ದೇನೆ. ಹಾಗಾಗಿ ಇಂದು ಕ್ಷೇತ್ರದ ಮಹಿಳೆಯರು ಯುವಕರು ಅತ್ಯದ್ಭುತ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಯುವ ಸಮುದಾಯದ ಬೆಂಬಲದೊ0ದಿಗೆ ಹಿರಿಯರ ಆಶೀರ್ವಾದದಿಂದ ಅಂಕೋಲಾ ಪಟ್ಟಣವನ್ನು ಅಭಿವೃದ್ಧಿ ಹೊಂದಿದ ನಗರವನ್ನಾಗಿ ಪರಿವರ್ತಿಸುವ ಪಣತೊಟ್ಟಿದ್ದೇನೆ ಎಂದರು.
ಕ್ಲಬ್ ವಿ ಪಿಟ್ನೆಸ್ ಮಾಲಿಕ ವಿಘ್ನೇಶ್ವರ ನಾಯ್ಕ ನೇತೃತ್ವದಲ್ಲಿ 400ಕ್ಕೂ ಯುವಕರು ಮತ್ತು ಮಹಿಳೆಯರು ಬಿಜೆಪಿಗೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಯುವಕರ ತಂಡ ಜಾತ್ಯತೀತ ಮನೋಭಾವದಿಂದ ಜನ ಮೆಚ್ಚಿದ ಶಾಸಕಿ ರೂಪಾಲಿ ನಾಯ್ಕ ಅವರ ಪ್ರಗತಿಪರ ವಿಚಾರ, ಹುಮ್ಮಸ್ಸಿನ ಕಾರ್ಯವೈಖರಿ ಹಾಗೂ ಎಲ್ಲರನ್ನು ಪ್ರೀತಿಯಿಂದ ಕಾಣುವ ಮನೋದೋರಣೆಯಿಂದಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ. ಐದು ವರ್ಷಗಳ ರೂಪಾಲಿಯವರ ಆಡಳಿತದಲ್ಲಿ ಯಾವುದೇ ಗಲಭೆಗಳಿಲ್ಲದೆ ಸೌಹಾರ್ದತೆಯಿಂದ ನಿರೀಕ್ಷಿಗೂ ಮೀರಿದ ಅಭಿವೃದ್ಧಿಯನ್ನು ಕಂಡಿದ್ದೇವೆ. ಸದ್ಯದಲ್ಲಿಯೇ ನರೇಂದ್ರ ಮೋದಿ ಅವರು ಕೂಡ ತಾಲ್ಲೂಕಿಗೆ ಬರುತ್ತಿದ್ದು ನಮ್ಮೆಲ್ಲರ ಉತ್ಸಾಹ ನೂರ್ಮಡಿಯಾಗಿದೆ. ಸದಾ ಶಾಸಕರು ರೂಪಾಲಿ ಅವರ ಪರವಾಗಿ ನಾವಿದ್ದೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ್ ಪಕ್ಷಕ್ಕೆ ಆತ್ಮೀಯತೆಯಿಂದ ಸ್ವಾಗತಿಸಿದರು. ಯುವ ನಾಯಕ ದಿಲೀಪ್ ಜಿ ಅರ್ಗೇಕರ ಉಪಸ್ಥಿತಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಭಾಸ್ಕರ ನಾರ್ವೇಕರ್, ಬಾಬು ಸುಂಕೇರಿ, ವಸಂತ ಗೌಡ ಮೀನುಗಾರ ಮುಖಂಡರಾದ ರೋಷನ್ ಹರಿಕಂತ್ರ, ಪ್ರವೀಣ್ ತಾಂಡೇಲ್, ನಾಗರಾಜ ನಾಯ್ಕ ಇದ್ದರು. ಚಂದ್ರಕಾ0ತ ನಾಯ್ಕ, ಅಭಿ ನಾಯ್ಕ, ಆದಿ ನಾಯ್ಕ, ಸಂಜೀವ್ ನಾಯ್ಕ, ರವಿ ವಾಜಂತ್ರಿ ವಿನು ವಜಂತ್ರಿ ವಿನಾಯಕ್ ಕುಂಬಾರ ಲಕ್ಷ್ಮೀಕಾಂತ ನಾಯ್ಕ, ಗಜಾನನ ನಾಯ್ಕ. ಯಶ್ ನಾಯಕ ದರ್ಶನ್ ನಾಯ್ಕ ಶುಭಂ ವೆಲ್ವೇಕರ ಒಳಗೊಂಡು 400 ಜನರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ದೇಶಭಕ್ತಿ, ನರೇಂದ್ರ ಮೋದಿ ಮತ್ತು ಶಾಸಕಿ ರೂಪಾಲಿ ನಾಯ್ಕ ಪರ ಘೋಷಣೆ ಕೂಗಿದರು.