ಶಿರಸಿ: ತಾಲೂಕಿನ ಹುಲೇಕಲ್ಲಿನ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2022-23 ರ ದ್ವಿತೀಯ ಪಿ ಯು ಸಿ ಅಂತಿಮ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಶೇ. 86.84% ವಾಣಿಜ್ಯ ವಿಭಾಗದಲ್ಲಿ ಶೇ. 95.65% ಪಡೆದು ಕಾಲೇಜಿನ ಒಟ್ಟೂ ಫಲಿತಾಂಶ 90.16% ಆಗಿದೆ.
ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ವಿದ್ಯಾಲಯದ ಒಟ್ಟೂ 61 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 31 ವಿದ್ಯಾರ್ಥಿಗಳು ಪ್ರಥಮ ದರ್ಜೆ, 14 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಿಂದ ಒಟ್ಟೂ 38 ವಿದ್ಯಾರ್ಥಿಗಳು ಹಾಜರಾಗಿದ್ದು, ಡಿಸ್ಟಿಂಕ್ಷನ್ -04, ಪ್ರಥಮ ದರ್ಜೆ 18, ದ್ವಿತೀಯ ದರ್ಜೆ 11 ಒಟ್ಟೂ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 86.84% ರಷ್ಟು ಆಗಿದೆ. ಕುಮಾರಿ ಭಾಗ್ಯಲಕ್ಷ್ಮಿ ಆರ್. ಹೆಗಡೆ 574[95.66%] ಅಂಕ ಪಡೆದು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕುಮಾರಿ ಸುಜಾತಾ ಎಲ್. ಮರಾಠಿ 560 [ 93.33% ] ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿ ಹಾಗೂ ಕುಮಾರಿ ಭಾರತಿ ಎಂ. ಮರಾಠಿ 533 [88.83% ] ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗ ಒಟ್ಟೂ 23 ವಿದ್ಯಾರ್ಥಿಗಳು ಹಾಜರಾಗಿದ್ದು, 06 ಡಿಸ್ಟಿಂಕ್ಷನ್, 13 ಪ್ರಥಮ ದರ್ಜೇ, 03 ದ್ವಿತೀಯ ದರ್ಜೆ ಒಟ್ಟೂ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 95.65% ರಷ್ಟು ಆಗಿದೆ. ಕುಮಾರಿ ಲಾವಣ್ಯ ಎಸ್. ಹೆಗಡೆ 581 [96.83%] ಅಂಕ ಪಡೆದು ವಿದ್ಯಾಲಯಕ್ಕೆ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರಥಮ ಸ್ಟಾಹಂ ಪಡೆದಿದ್ದು, ಕುಮಾರ ಶಿವಾಂಶು ಎಚ್. ಬಾಡ್ಕರ್ 562 [93.66%] ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿ ಮತ್ತು ಕುಮಾರ ವಿನಾಯಕ ಎನ್. ಭಟ್ಟ 561 [93.50%] ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಭಾಗ್ಯಲಕ್ಷ್ಮಿ ಆರ್. ಹೆಗಡೆ, ಇವಳು ರಾಜ್ಯಶಾಸ್ತ್ರ ವಿಷಯದಲ್ಲಿ 100 ಕ್ಕೆ 100, ಕುಮಾರಿ ಲಾವಣ್ಯ ಎಸ್. ಹೆಗಡೆ ಇವಳು ಲೆಕ್ಕಶಾಸ್ತ್ರ ಮತ್ತು ಗಣಕವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಹಾಗೂ ಕುಮಾರ ಗಣೇಶ ಆಚಾರಿ ಇವನು ಗಣಕ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾಲಯವು ಸತತವಾಗಿ ಅತ್ಯುತ್ತಮ ಫಲಿತಾಂಶ ನೀಡುತ್ತಾ ಬಂದಿರುವ ಬಗ್ಗೆ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಹಾಪೋಷಕರೂ ಆದ ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಕಾರ್ಯಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪೂರ್ವವಿದ್ಯಾರ್ಥಿ ಸಂಘ, ಪ್ರಾಚಾರ್ಯರು, ಉಪನ್ಯಾಸಕರು, ಹಿರಿಯ ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿರುತ್ತಾರೆ.